ಕುಡತಿನಿ (ಸಂಡೂರು): ಪಟ್ಟಣದ ಹೊರವಲಯದಲ್ಲಿನ ಕುಡಿಯುವ ನೀರಿನ ಕೆರೆಯು ಬರಿದಾಗಿದ್ದು, ಪಟ್ಟಣದಲ್ಲಿನ ಎಲ್ಲ ವಾರ್ಡ್ಗಳ ಜನರು ಕುಡಿಯುವ, ಬಳಕೆಯ ನೀರಿಗಾಗಿ ಕೊಳವೆ ಬಾವಿಗಳನ್ನು ನೆಚ್ಚಿಕೊಂಡಿದ್ದು, ಜನರು ನಿತ್ಯ ನೀರಿಗಾಗಿ ಪರಿತಪಿಸುವಂತಾಗಿದೆ.

ಪಟ್ಟಣದ 19 ವಾರ್ಡ್ಗಳಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದು, ಎಲ್ಲ ವಾರ್ಡ್ಗಳ ಜನರು ಕುಡಿಯುವ, ಬಳಕೆಯ ನೀರಿಗಾಗಿ ತಮ್ಮ ವಾರ್ಡ್ಗಳಲ್ಲಿನ ಕೊಳವೆ ಬಾವಿಗಳ ನೀರನ್ನೆ ಆವಲಂಬಿಸಿದ್ದು, ಜನರು ನೀರಿಗಾಗಿ ಹಗಲಿರುಳು ಕಾಯುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದಲ್ಲಿನ ಜನರ ನೀರಿನ ಬವಣೆ ನೀಗಿಸಲು ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ಒಟ್ಟು 54 ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಅವುಗಳಲ್ಲಿ 10 ಕೊಳವೆಬಾವಿಗಳು ಅಂತರ್ಜಲದ ಕೊರತೆಯಿಂದ ನೀರಿಲ್ಲದೆ ಬತ್ತಿವೆ. ಇನ್ನೂಳಿದ ಕೊಳವೆ ಬಾವಿಗಳಲ್ಲಿನ ಅಲ್ಪ ಪ್ರಮಾಣದ ನೀರನ್ನು ಸಂಗ್ರಹಿಸಿ, ಮೇಲ್ಮಟ್ಟದ ಟ್ಯಾಂಕರ್ಗಳಿಗೆ ಪೂರೈಕೆ ಮಾಡಿ ಪಟ್ಟಣದ ಎಲ್ಲ ವಾರ್ಡ್ಗಳಿಗೆ ಹಂತ ಹಂತಬಾಗಿ ನೀರು ಸರಬರಾಜು ಮಾಡಲಾಗುತ್ತಿದೆ.

ಪಟ್ಟಣ ಪಂಚಾಯಿತಿಯವರು ಪ್ರಸ್ತುತ ನೀರಿನ ಸಮಸ್ಯೆಯ ನಿವಾರಣೆಗಾಗಿ ಬಿಟಿಪಿಎಸ್ ಘಟಕದ ಬಳಿ ನೂತನವಾಗಿ ಎಂಟು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಆ ನೀರನ್ನು ಪೈಪ್ಲೈನ್ ಮೂಲಕ ಕೆರೆಯ ಆವರಣದಲ್ಲಿನ ನೆಲಮಟ್ಟದ ಟ್ಯಾಂಕರ್ಗೆ ಪೂರೈಕೆ ಮಾಡಿ, ಸರತಿಯಂತೆ ಒಂದು ವಾರ್ಡ್ಗೆ ಎಂಟು ದಿನಕ್ಕೋಮ್ಮೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ.

ಪಟ್ಟಣವು ದಿನದಿನಕ್ಕೆ ತೀವ್ರಗತಿಯಲ್ಲಿ ವಿಸ್ತಾರಗೊಳುತ್ತಿದ್ದು, ಪಟ್ಟಣದ ಜನಸಂಖ್ಯೆಗೆ ತಕ್ಕಂತೆ ನೀರು ಪೂರೈಕೆ ಮಾಡಲು ಅಧಿಕಾರಿ, ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಕಂಡುಕೊಳ್ಳದೇ ಸಂಪೂರ್ಣವಾಗಿ ವಿಫಲರಾಗಿದ್ದು, ಜನರು ವರ್ಷಪೂರ್ತಿ ನೀರಿಗಾಗಿ ಪರದಾಡುವುದು ಸಾಮಾನ್ಯವಾಗಿದೆ.

ಪಟ್ಟಣದ ಹೊರವಲಯದ ತಿಮ್ಮಲಾಪುರ ಗ್ರಾಮದ ಬಳಿಯ ಎಚ್ಎಲ್ಸಿ ಕಾಲುವೆಯಿಂದ ಪ್ರತಿವರ್ಷ ಕುಡತಿನಿಯ ಕೆರೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲ ತಾಂತ್ರಿಕ ಕಾರಣಗಳಿಂದ ಕೆರೆಯು ಸಕಾಲಕ್ಕೆ ಭರ್ತಿಯಾಗದೇ ಬೆಸಿಗೆಗೆ ಮುನ್ನವೇ ಕೆರೆ ಬರಿದಾಗುತ್ತಿದ್ದು, ನೀರಿನ ಶಾಶ್ವತ ಪರಿಹಾರಕ್ಕಾಗಿ ಏಳುಬೆಂಚಿ ಗ್ರಾಮದ ಬಳಿಯ ಎಲ್ಎಲ್ಸಿ ಕಾಲುವೆಯ ಮೂಲಕ ಕುಡತಿನಿ ಕೆರೆಗೆ ನೀರು ಸರಬರಾಜು ಮಾಡಬೇಕು ಎಂದು ಜನರ ಒತ್ತಾಯವಾಗಿದೆ.

ಸ್ಥಗಿತಗೊಂಡ ಜಲ ಶುದ್ದೀಕರಣ ಘಟಕ: ಕೆರೆ ಆವರಣದಲ್ಲಿ ನಗರೋತ್ಥಾನ ಅನುದಾನದಲ್ಲಿ 2.38 ಎಂ.ಎಲ್.ಡಿ ಸಾಮರ್ಥ್ಯದ ಆನ್ಲೈನ್ ಮೈಕ್ರೋಸ್ಕ್ರೀನ್ ಜಲ ಶುದ್ಧೀಕರಣ ಘಟಕವನ್ನು ₹188.70 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮಳೆಯ ಅಭಾವ, ಎಚ್ಎಲ್ಸಿ ಕಾಲುವೆಯ ನೀರು ಸ್ಥಗಿತಗೊಂಡ ಪರಿಣಾಮ ಕೆರೆಯಲ್ಲಿ ನೀರಿನ ಸಂಗ್ರಹದ ಪ್ರಮಾಣ ಕಡಿಮೆಯಾಗಿದ್ದರಿಂದ ಪಂಚಾಯಿತಿಯವರು ಜಲ ಶುದ್ಧೀಕರಣ ಕಾರ್ಯವನ್ನು ಕಳೆದ ಒಂದು ತಿಂಗಳಿಂದ ಸಂಪೂರ್ಣವಾಗಿ ನಿಲ್ಲಿಸಿದ್ದಾರೆ.

ನೀರಿಗಾಗಿ ಬಿಟಿಪಿಎಸ್ ಘಟಕದ ಅಧಿಕಾರಿಗೆ ಪತ್ರ: ಕುಡತಿನಿ ಪಟ್ಟಣದಲ್ಲಿನ ಕೆರೆಯು ನೀರಿಲ್ಲದೆ ಬರಿದಾಗಿದ್ದು, ಪಟ್ಟಣದ ಜನರು ನೀರಿನ ಸಮಸ್ಯೆಯಿಂದ ನಿತ್ಯ ಪರದಾಡುತಿದ್ದಾರೆ. ನೀರಿನ ಸಮಸ್ಯೆಯ ತಾತ್ಕಾಲಿಕ ನಿವಾರಣೆಗಾಗಿ ಬಿಟಿಪಿಎಸ್ ಘಟಕದಲ್ಲಿನ ಕೆರೆಯಿಂದ ಕುಡತಿನಿ ಕೆರೆಗೆ ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡುವಂತೆ ಘಟಕದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-25-1926597397

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.