ಕೂಡ್ಲಿಗಿ: ಇತ್ತೀಚೆಗೆ ಕರಡಿ ದಾಳಿಯಿಂದ ಮೃತಪಟ್ಟಿದ್ದ ತಾಲ್ಲೂಕಿನ ಹಾಲಸಾಗರ ಗ್ರಾಮದ ಜಿ.ಓಬಯ್ಯ ಅವರ ಮನೆಗೆ ಭೇಟಿ ನೀಡಿದ ಶಾಸಕ ಡಾ.ಶ್ರೀನಿವಾಸ್ ಎನ್.ಟಿ. ಹಾಗೂ ಅರಣ್ಯಾಧಿಕಾರಿಗಳು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ನಂತರ ಸರ್ಕಾರದಿಂದ ನೀಡುವ ₹ 20 ಲಕ್ಷ ಪರಿಹಾರದ ಚೆಕ್ ಹಾಗೂ ಮಾಸಿಕ ₹ 4 ಸಾವಿರ ವೇತನದ ಅದೇಶ ಪ್ರತಿಯನ್ನು ನೀಡುವುದರ ಜೊತೆಗೆ ಶಾಸಕರು ತಮ್ಮ ವೈಯಕ್ತಿಕ ₹ 50 ಸಾವಿರ ನಗದನ್ನು ಮೃತ ಓಬಯ್ಯನ ಪತ್ನಿ ಅಂಜಿನಮ್ಮನಿಗ ನೀಡಿ ಧೈರ್ಯ ತುಂಬಿದರು.

ನಂತರ ಶಾಸಕ ಡಾ.ಶ್ರೀನಿವಾಸ್ ಎನ್.ಟಿ.ಮಾತನಾಡಿ, ಆಕಸ್ಮಿಕವಾಗಿ ನಡೆದ ಘಟನೆಯಿಂದ ಬಡ ಕುಟುಂಬಕ್ಕೆ ತೀರ ಅನ್ಯಾಯವಾಗಿದೆ. ಅದರಿಂದ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಹರಿಹಾರವನ್ನು ತಕ್ಷಣವೇ ನೀಡಿದ್ದೇವೆ. ಈ ಹಣವನ್ನು ಅನ್ಯ ಕಾರಣಗಳಿಗೆ ಬಳಸಿಕೊಳ್ಳದೆ ಜೀವನದ ಭದ್ರತೆಗೆ ಉಳಿಸಿಕೊಳ್ಳಬೇಕು ಎಂದು ಹೇಳಿದ ಅವರು, ಕಾಡಾಂಚಿನ ಗ್ರಾಮಗಳಲ್ಲಿ ಕರಡಿಗಳ ಹಾವಳಿ ಇದ್ದು, ರೈತರು ಹಾಗೂ ಜನರು ಎಚ್ಚರಿಕೆಯಿಂದ ಹೊಲಗಳಲ್ಲಿ ಕೆಲಸ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅರಣ್ಯ ಇಲಾಖೆಯ ಡಿಸಿಎಫ್ ಅನುಪಮ, ಎಸಿಎಫ್ ಭಾಸ್ಕರ, ತಹಶೀಲ್ದಾರ್ ವಿ.ಕೆ.ನೇತ್ರಾವತಿ, ವಲಯ ಅರಣಾಧಿಕಾರಿಗಳಾದ ಗುಡೇಕೋಟೆ ಜಗದೀಶ್ ಮೇದಾ, ಕೂಡ್ಲಿಗಿಯ ಸಂದೀಪ್ ನಾಯಕ, ಹಾಲೇಶ್, ಮುಖಂಡರಾದ ಎಸ್. ವೆಂಕಟೇಶ್, ಗುಡೇಕೋಟೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎನ್.ಕೃಷ್ಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.