ಕುರುಗೋಡು: ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ಬೆಳಗಿನಜಾವ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಹದ ಮಳೆ ಸುರಿಯಿತು.

ಕಳೆದ ಒಂದು ವಾರದಿಂದ ತೀವ್ರ ಬಿಸಿಲಿನ ತಾಪಕ್ಕೆ ಸಿಲುಕಿ ಕಂಗೆಟ್ಟಿದ್ದ ಜನರಿಗೆ ಸುರಿದ ಹದ ಮಳೆ ಮುದ ನೀಡಿದೆ. ಬೆಳಗಿನ ಜಾವ 4 ಗಂಟೆಯಿಂದ ಗುಡುಗು, ಸಿಡಿಲು, ಬಿರುಗಾಳಿ ಬೀಸಿತು.

ಪಟ್ಟಣದ ಕೆಲವು ತಗ್ಗುಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹವಾಗಿವೆ. ಮಳೆಯಿಂದ ಚರಂಡಿ ತುಂಬಿದ ಪರಿಣಾಮ ಮುಖ್ಯವೃತ್ತದಲ್ಲಿ ರಸ್ತೆಯಮೇಲೆ ಕಲುಷಿತ ನೀರು ಹರಿಯಿತು. ಬಿರುಗಾಳಿಗೆ ಉನೋಂದಣಾಧಿಕಾರಿ ಕಚೇರಿ ಬಳಿ ಎರಡು ಗೂಡಂಗಡಿಗಳಿಗೆ ಅಳವಡಿಸಿದ್ದ ಶೀಟ್ ಕಿತ್ತುಹೋಗಿವೆ.

ಪಟ್ಟಣದ ಇಂದಿರಾನಗರದ ಪ್ರದೇಶದಲ್ಲಿ ವಿದ್ಯುತ್ ತಂತಿ ತುಂಡಾಗಿಬಿದ್ದ ಪರಿಣಾಮ ಎರಡು ಕುರಿಮರಿಗಳು ಮೃತಪಟ್ಟಿವೆ. ಪೊಲೀಸ್ ಠಾಣೆ ಪಕ್ಕದಲ್ಲಿ ಒಂದು ವಿದ್ಯುತ್ ಕಂಬ ಸೇರಿ ತಾಲ್ಲೂಕಿನ ಗೆಣಿಕೆಹಾಳು, ಸೋಮಲಾಪುರ, ಬಾದನಹಟ್ಟಿ ಮತ್ತು ವದ್ದಟ್ಟಿ ಗ್ರಾಮಗಳಲ್ಲಿ 25ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಪಂಪ್ ಸೆಟ್ಗಳಿಗೆ ವಿದ್ಯುತ್ ಪೂರೈಸುವ ಕಂಬಗಳನ್ನು ಶನಿವಾರದೊಳಗೆ ಸರಿಪಡಿಸಲಾಗುವುದು. ಗ್ರಾಮಗಳಲ್ಲಿ ಬಿದ್ದ ಕಂಬಗಳನ್ನು ಶುಕ್ರವಾರ ಸರಿಪಡಿಸಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಜೆಸ್ಕಾಂ ಎಇಇ ಮಹಮ್ಮದ್ ಜಾಫರ್ ತಿಳಿಸಿದರು.

2.3 ಸೇ.ಮೀ. ಮಳೆಯಾದ ಬಗ್ಗೆ ಇಲ್ಲಿನ ಮಳೆಮಾಪನ ಕೇಂದ್ರದಲ್ಲಿ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-25-158017726

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.