ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಬಾಣಿಗರು ಸಾಂಸ್ಕೃತಿಕ ಶ್ರೀಮಂತರು–ಮೊಗಳ್ಳಿ

‘ತಾಂಡಾ’ ಮತ್ತು ಸಾಹಿತ್ಯ ಧಾರೆಗಳಲ್ಲಿ ಲಂಬಾಣಿ ಸಂಸ್ಕೃತಿಯ ಮುಖಾಮುಖಿ ಪುಸ್ತಕ ಬಿಡುಗಡೆ
Last Updated 1 ಡಿಸೆಂಬರ್ 2022, 13:19 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಲೇಖಕ ಪ್ರೊ.ಶಿರಗಾನಹಳ್ಳಿ ಶಾಂತ ನಾಯ್ಕ ಅವರ ‘ತಾಂಡಾ’ ಮತ್ತು ಸಾಹಿತ್ಯ ಧಾರೆಗಳಲ್ಲಿ ಲಂಬಾಣಿ ಸಂಸ್ಕೃತಿಯ ಮುಖಾಮುಖಿ ಪುಸ್ತಕಗಳ ಬಿಡುಗಡೆ ಸಮಾರಂಭ ನಗರದ ವಿಜಯನಗರ ಕಾಲೇಜಿನಲ್ಲಿ ಗುರುವಾರ ನಡೆಯಿತು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ, ಸಾಹಿತಿ ಪ್ರೊ. ಮೊಗಳ್ಳಿ ಗಣೇಶ್‌ ಅವರು ಪುಸ್ತಕ ಬಿಡುಗಡೆಗೊಳಿಸಿ, ಮೂಲ ಬುಡಕಟ್ಟು ಸಮುದಾಯವಾದ ಲಂಬಾಣಿಗರು ಅಲೆಮಾರಿ ಸಮುದಾಯವೂ ಆಗಿದೆ. ಇವರ ಇತಿಹಾಸವನ್ನು ನೋಡಿದರೆ ಇಂದಿನ ರೊಮೆನಿಯಾದ ನಿವಾಸಿಗಳು ಇಲ್ಲಿನ ಲಮಾಣಿ ಸಮುದಾಯದವರು. ಇವರು ಅನೇಕ ದೇಶಗಳಿಗೆ ವಲಸೆ ಹೋಗಿ ಹಂಚಿ ಹೋಗಿರುವುದನ್ನು ಕಾಣುತ್ತೇವೆ. ಇವರು ಸಾಂಸ್ಕೃತಿಕವಾಗಿ ಸಿರಿವಂತರು ಎಂದು ಹೇಳಿದರು.

ಒಂದು ಸಮುದಾಯದ ಸಾಂಸ್ಕೃತಿಕ ಸಮುದಾಯದ ವ್ಯಕ್ತಿಗಳು ಬರೆಯುವುದಕ್ಕೂ ಮತ್ತು ಮುಂದುವರೆದ ಸಮುದಾಯದ ವ್ಯಕ್ತಿಗಳು ಬರೆಯುವುದಕ್ಕೂ ಬಹಳ ವ್ಯತ್ಯಾಸವಿದೆ. ಲಂಬಾಣಿ ಸಮುದಾಯದಲ್ಲೇ ಹುಟ್ಟಿದ ಶಾಂತ ನಾಯ್ಕ ಅವರು ಲಂಬಾಣಿಗರ ಭಾಷೆ, ಕಲೆ, ಸಂಸ್ಕೃತಿಯನ್ನು ನೋಡಿ ಪುಸ್ತಕದಲ್ಲಿ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಪ್ರೊ.ರಾಜಪ್ಪ ದಳವಾಯಿ ಮಾತನಾಡಿ, ಶಾಂತ ನಾಯ್ಕ ಅವರು ಬಹುಮುಖ ಪ್ರತಿಭೆ ಹೊಂದಿವರು. ಅವರ ‘ಮಲಾಣ’ ಮತ್ತು ‘ತಾಂಡಾ’ ಕಾದಂಬರಿಗಳು ಒಂದು ಸಮುದಾಯದ ಏಳು-ಬೀಳುಗಳನ್ನು ಚಿತ್ರಿಸಿದೆ. ಅವರ ಪ್ರತಿಭೆಯನ್ನು ಕೇವಲ ಆಡಳಿತಾತ್ಮಕ ವಿಷಯಕ್ಕೆ ಸೀಮಿತಗೊಳ್ಳದೇ ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನಾರ್ಹ ಎಂದರು.

ಹಗರಿಬೊಮ್ಮನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸತೀಶ್ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ನಾಯಕರ ಹುಲುಗಪ್ಪ, ವಿಜಯನಗರ ಕಾಲೇಜಿನ ಅಧ್ಯಕ್ಷ ಅಸುಂಡಿ ಬಿ. ನಾಗರಾಜಗೌಡ, ಪ್ರಾಂಶುಪಾಲ ವಿ.ಎಸ್.ಪ್ರಭಯ್ಯ, ಕೆ.ಪ್ರಕಾಶ್, ವಿರೂಪಾಕ್ಷಪ್ಪ ಸ್ವಾಮಿ, ಕೆ.ಆರ್.ಕೇಶವ ಮೂರ್ತಿ, ಸೃಷ್ಟಿ ನಾಗೇಶ, ವೀರಮ್ಮ ಹಿರೇಮಠ, ನೇಹಾ, ಶಿವಮಲ್ಲಿಕಾರ್ಜುನ, ಬಸವರಾಜ ಕೆ., ಪ್ರಕಾಶ್‌ ಇದ್ದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಿಜಯನಗರ ಕಾಲೇಜು, ಆದಿವಾಸಿ ಕಲೆ, ಸಾಹಿತ್ಯ, ಸಂಶೋಧನಾ ಪಾಸ್ಟ್, ಬಳ್ಳಾರಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT