ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಂದಾಲ್‌ಗೆ ಜಮೀನು ಮಾರಾಟ ನ್ಯಾಯಸಮ್ಮತ: ಕಾಂಗ್ರೆಸ್‌ ನಾಯಕ ಕೊಂಡಯ್ಯ

Published 27 ಆಗಸ್ಟ್ 2024, 20:46 IST
Last Updated 27 ಆಗಸ್ಟ್ 2024, 20:46 IST
ಅಕ್ಷರ ಗಾತ್ರ

ಬಳ್ಳಾರಿ: ‘ಸಂಡೂರು ತಾಲ್ಲೂಕಿನ ತೋರಣಗಲ್‌ನಲ್ಲಿ ಇರುವ ಜಿಂದಾಲ್‌ ಉಕ್ಕು ಕಂಪನಿಗೆ 3,677 ಎಕರೆ ಜಮೀನು ಮಾರಿದ್ದು, ನ್ಯಾಯಕ್ಕೆ ಸಿಕ್ಕ ಜಯ’ ಎಂದು ಕಾಂಗ್ರೆಸ್‌ ನಾಯಕ ಕೆ.ಸಿ ಕೊಂಡಯ್ಯ ಹೇಳಿದರು.  

‘ಜಿಂದಾಲ್ ಕಂಪನಿಗೆ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗಿತ್ತು. ಗುತ್ತಿಗೆ ಅವಧಿ ಮುಗಿದ ಬಳಿಕ ಮಾರಬೇಕಿತ್ತು. ಪ್ರಕ್ರಿಯೆ ವಿಳಂಬವಾದ ಕಾರಣ ಕಂಪನಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಈಚೆಗೆ ನ್ಯಾಯಾಲಯವು ಕಂಪನಿ ಪರ ತೀರ್ಪು ನೀಡಿದ್ದು, ಅದರಂತೆ ಮಾರಲು ತೀರ್ಮಾನಿಸಲಾಗಿದೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. 

‘ಮಾರಾಟ ಪ್ರಕ್ರಿಯೆಯಲ್ಲಿ ಅವ್ಯವಹಾರ ಆಗಿದೆಯೆಂದು ಶಾಸಕ ಅರವಿಂದ ಬೆಲ್ಲದ್‌ ಸೇರಿ ಸಂಘಸಂಸ್ಥೆಗಳು, ಹೊರಗಿನವರು ಬಳ್ಳಾರಿ ಜನರ ದಾರಿತಪ್ಪಿಸುತ್ತಿದ್ದಾರೆ. ದಾಖಲೆಗಳನ್ನು ನೋಡಿ ಮಾತನಾಡಬೇಕು’ ಎಂದರು.  

‘ಜಿಂದಾಲ್ ಕಂಪನಿಯ ವಾರ್ಷಿಕ ಉತ್ಪಾದನೆ 1.5 ಲಕ್ಷ ಟನ್‌ನಿಂದ 27 ಲಕ್ಷ ಟನ್‌ಗೆ ಏರಿಕೆಯಾಗಿದೆ. ಬಳ್ಳಾರಿ ಜೀವನಾಡಿಯಾದ ಈ ಕಂಪನಿ ನಂಬಿ 30 ಸ್ಪಾಂಜ್ ಐರನ್‌ ಕಂಪನಿಗಳಿವೆ. ಹಲವರಿಗೆ ಉದ್ಯೋಗ ಸಿಕ್ಕಿದೆ. ಬೇರೆ ಕಾರ್ಖಾನೆಗಳು ಬರಲು ಇಲ್ಲಿ ಪೂರಕ ವ್ಯವಸ್ಥೆ ಇಲ್ಲ. ಹೀಗಾಗಿ ನಾವು ಜಿಂದಾಲ್‌ಗೆ ಬೆಂಬಲಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT