ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಸಾಧನೆ

Last Updated 31 ಅಕ್ಟೋಬರ್ 2022, 13:33 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಷೋಟಕಾನ್‌ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ನಗರದ ಕರಾಟೆ ಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ.

ಇಲ್ಲಿನ ಇಂಟರ್‌ನ್ಯಾಷನಲ್‌ ಷೋಟಕಾನ್‌ ಕರಾಟೆ ತಂಡದ ಪಟುಗಳು ಮುಖ್ಯ ತರಬೇತುದಾರ ಅಕ್ಬರ್‌ ಮಾರ್ಗದರ್ಶನದಲ್ಲಿ ಉತ್ತಮ ಸಾಧನೆ ತೋರಿ ಪ್ರಶಸ್ತಿ ಜಯಿಸಿದ್ದಾರೆ. ಬ್ಲ್ಯಾಕ್‌ಬೆಲ್ಟ್‌ ವಿಭಾಗದಲ್ಲಿ ಕುಶ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳೆರಡೂ ಬಾಚಿಕೊಂಡಿದ್ದಾರೆ. ಬ್ರೌನ್‌ ಬೆಲ್ಟ್‌ನಲ್ಲಿ ರಾಜು ಕೂಡ ಉತ್ತಮ ಸಾಧನೆ ತೋರಿ, ಪ್ರಥಮ, ದ್ವಿತೀಯ ಬಹುಮಾನ ಗೆದ್ದಿದ್ದಾರೆ. ಬ್ಲೂ ಬೆಲ್ಟ್‌ನಲ್ಲಿ ಜೆ.ಬಿ. ರಾಹುಲ್‌ ಪ್ರಥಮ ಹಾಗೂ ದ್ವಿತೀಯ ಬಹುಮಾನ ಜಯಿಸಿದ್ದಾರೆ.

ಆರೆಂಜ್‌ ಬೆಲ್ಟ್‌ ವಿಭಾಗದಲ್ಲಿ ಉಮೇಶ್‌, ಆಲಂ, ಸಿಂಚನ, ಅಶೋಕ, ರಾಜು, ಋತಿಕ್‌, ಗ್ರೀನ್‌ ಬೆಲ್ಟ್‌ನಲ್ಲಿ ಸುಲೇಮಾನ್‌, ಆಸ್ಮಾ, ಯಲ್ಲೋ ಬೆಲ್ಟ್‌ ವಿಭಾಗದಲ್ಲಿ ಚೈತ್ರ, ವಿನೋದ್‌, ಮಂಜು, ಮಧುಸೂದನ್‌, ದಾದಾಪೀರ್‌, ಮೌಲಾ ಹುಸೇನ್‌, ಕಾರ್ತಿಕ್‌, ಪದ್ಮಾ ಪ್ರಥಮ, ದ್ವಿತೀಯ ಬಹುಮಾನಗಳೆರಡೂ ಗಳಿಸಿದ್ದಾರೆ. ಪಾರೂ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT