ಬಳ್ಳಾರಿ: ಬಳ್ಳಾರಿಯ ಲೋಕಾಯುಕ್ತಕ್ಕೆ ಪೂರ್ಣಕಾಲಿಕ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮತ್ತು ಸೈಬರ್ ಕ್ರೈಂ ಪೊಲೀಸ್ ಠಾಣೆ (ಸಿಸಿಪಿಎಸ್)ಗೆ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್ಪಿ) ನೇಮಿಸುವಂತೆ ವಿಧಾನ ಪರಿಷತ್ ಸದಸ್ಯ ವೈ.ಎಂ ಸತೀಶ ಗುರುವಾರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

ಬಳ್ಳಾರಿ ಲೋಕಾಯುಕ್ತಕ್ಕೆ ಎಸ್ಪಿ ಇಲ್ಲದೇ ಇರುವುದರ ಬಗ್ಗೆ ಜ. 24ರಂದು, ಸೈಬರ್ ಠಾಣೆಗೆ ಡಿಎಸ್ಪಿ ಇಲ್ಲದೇ ಇರುವುದರ ಬಗ್ಗೆ ಜ. 29ರಂದು ಪ್ರಜಾವಾಣಿಯಲ್ಲಿ ವಿಸ್ತೃತ ವರದಿ ಪ್ರಕಟವಾಗಿದ್ದರು.

ಇದರ ಆಧಾರದಲ್ಲಿ ಗುರುವಾರ ಗೃಹ ಸಚಿವರಿಗೆ ವೈ.ಎಂ ಸತೀಶ ಪತ್ರ ಬರೆದಿದ್ದಾರೆ. ಬಳ್ಳಾರಿ ಲೋಕಾಯುಕ್ತ ಎಸ್ಪಿ ಹುದ್ದೆ ವರ್ಷದಿಂದ ಖಾಲಿ ಇದೆ. ಹಿಂದಿನ ಪ್ರಕರಣಗಳ ತನಿಖೆಯ ಪ್ರಗತಿ ಕುಂಠಿತವಾಗುತ್ತಿದೆ. ಆದ್ದರಿಂದ ಕೂಡಲೇ ಎಸ್ಪಿ ನೇಮಕ ಮಾಡಬೇಕು. ಸೈಬರ್ ಕ್ರೈಂ ಠಾಣೆಯಲ್ಲಿ 277 ಪ್ರಕರಣಗಳಲ್ಲಿ ₹32 ಕೋಟಿ ವಂಚನೆಯಾಗಿದೆ. ಆದ್ದರಿಂದ ಅಲ್ಲಿಗೆ ಡಿಎಸ್ಪಿಯನ್ನಿ ನಿಯೋಜಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.