ಹಗರಿಬೊಮ್ಮನಹಳ್ಳಿ: ಪಟ್ಟಣದ ಪುರಸಭೆಯ ಹಳೆ ಕಚೇರಿ ಹಿಂಭಾಗದಲ್ಲಿರುವ ಶ್ರೀ ಮುದುಗಲ್ಲು ಓಂಕಾರಪ್ಪನವರ ಪುರಸಭೆಯ ಉದ್ಯಾನದಲ್ಲಿ ಸ್ಥಾಪಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುತ್ಥಳಿ ಅವರ ಜಯಂತಿ ದಿನವೇ ಅನಾಥವಾಗಿತ್ತು.

ಅವರಿಗೆ ಪೂಜೆ ಮತ್ತು ಗೌರವ ಸಲ್ಲಿಸುವುದಿರಲಿ, ಪುತ್ಥಳಿ ಸ್ಥಾಪಿಸಿರುವ ಸ್ಥಳವನ್ನು ಸ್ವಚ್ಛಗೊಳಿಸಿಲ್ಲ, ಗಿಡಮರಗಳ ತ್ಯಾಜ್ಯ ಬಿದ್ದಿದೆ, ಅದರ ಮಡುವಿನಲ್ಲಿಯೇ ಗಾಂಧೀಜಿ ಪುತ್ಥಳಿ ಇರಿಸಿದಂತಿತ್ತು. ಪುತ್ಥಳಿಯ ಮೇಲೆ ಪಕ್ಷಿಗಳ ಮಲಮೂತ್ರದಿಂದ ಮಲೀನಗೊಳಿಸಿವೆ. ಸ್ವಚ್ಛಗೊಳಿಸಿ ವರ್ಷ ಕಳೆದಿದೆ ಎನ್ನುವಂತಿದೆ. ಪುತ್ಥಳಿಯನ್ನು 2009ರ ಜ.26ರಂದು ಗ್ರಾಮ ಪಂಚಾಯ್ತಿ ಆಡಳಿತದಲ್ಲಿರುವಾಗ ಸ್ಥಾಪಿಸಲಾಗಿತ್ತು, ಈಗಿನ ಶಾಸಕ ಕೆ.ನೇಮರಾಜನಾಯ್ಕ ಆಗ ಉದ್ಘಾಟಿಸಿದ್ದರು.

ಮಹಾತ್ಮ ಗಾಂಧೀಜಿ ಪುತ್ಥಳಿ ಸ್ವಚ್ಛಗೊಳಿಸುವ ಕುರಿತಂತೆ ಪುರಸಭೆಯ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ತಾಳಿದ್ದಾರೆ. ಮಹಾತ್ಮ ಗಾಂಧೀಜಿ ಅವರಿಗೆ ಅವರ ಜನ್ಮದಿನದಂದೇ ಅಗೌರವ ತೋರಿಸಿದ್ದಾರೆ ಎಂದು ವಕೀಲ ಎಚ್.ಆಂಜನೇಯ ಸೇರಿದಂತೆ ಪಟ್ಟಣದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸ್ವಚ್ಛತೆ ಮರಿಚಿಕೆ; ಆರೋಪ

ಕಾನಹೊಸಹಳ್ಳಿ: ಪಟ್ಟಣದಲ್ಲಿ ಸ್ವಚ್ಛತೆಗೆ ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿದ್ದು ಊರಲ್ಲಿ ಮಾರಮ್ಮ ದೇವಿಯ ಜಾತ್ರೋತ್ಸವ ನಡೆಯುತ್ತಿದ್ದರು ಸಹ ಸ್ವಚ್ಛತೆ ಕಾರ್ಯ ಕೈಗೊಂಡಿಲ್ಲ ಎಂದು ಯುವ ಮುಖಂಡ ಸೂರ್ಯ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.

ಕೂಡ್ಲಿಗಿ ತಾಲ್ಲೂಕಿನ ಅತಿದೊಡ್ಡ ಹಾಗೂ ವಾಣಿಜ್ಯ ಹೋಬಳಿ ಕೇಂದ್ರವಾದ ಕಾನಹೊಸಹಳ್ಳಿ ಪಟ್ಟಣವು ಸ್ವಚ್ಛತೆಯಿಲ್ಲದೆ ಗಬ್ಬು ನಾರುವಂತ ಸ್ಥಿತಿ ಇದೆ.

ಮಹಾತ್ಮಾ ಗಾಂಧೀಜಿ ಜಯಂತಿಯಂದು ಇಡಿ ದೇಶವೇ ಸ್ವಚ್ಚತಾ ಆಂದೋಲನ ಹಮ್ಮಿಕೊಂಡಿದ್ದು ಪಟ್ಟಣದಲ್ಲಿ ಸ್ವಚ್ಛತೆ ಇಲ್ಲದಿರುವುದು ನಾಚಿಕೆಗೇಡಿನ ಸಂಗಾತಿಯಾಗಿದೆ ಎಂದರು. ಪಟ್ಟಣದ ಸಮೀಪ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 50ರ ಸರ್ವೀಸ್ ರಸ್ತೆಯ ಎರಡು ಬದಿಯಲ್ಲಿಯೂ ಕೋಳಿ ತ್ಯಾಜ್ಯ ಮದ್ಯದ ಪೌಚ್ಗಳು ಸೇರಿದಂತೆ ಅಂಗಡಿಗಳ ತ್ಗಾಜ್ಯ ಎಸೆಯುತ್ತಿದ್ದು ಅವುಗಳು ಪಟ್ಟಣಕ್ಕೆ ಬರುವವರಿಗೆ ಸ್ವಾಗತ ಕೋರುತ್ತಿವೆ ಎಂದು ಆರೋಪಿಸಿದ್ದು ಗ್ರಾಮ ಪಂಚಾಯಿತಿ ಅಧಿಕಾರಿಗಳ ಈ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದರು.

‘ಪಟ್ಟಣದ ಎಚ್.ಕೆ.ಕುಂಟೆ ರಸ್ತೆ ಉಜ್ಜಿನಿ ರಸ್ತೆಗಳಷ್ಟೆಯಲ್ಲದೆ ಪಟ್ಟಣದಲ್ಲಿಯೂ ಸ್ವಚ್ಛತೆ ಮರೀಚಿಕೆಯಾಗಿದೆ. ಮಂಗಳವಾರ ಸಂತೆ ನಡೆದಿದ್ದು ಬುಧವಾರ 10 ಗಂಟೆಯಾದರು ಸ್ವಚ್ಚಗೊಳಿಸಿಲ್ಲ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.