ಮರಿಯಮ್ಮನಹಳ್ಳಿ: ಪಟ್ಟಣದ ಆರಾಧ್ಯ ದೈವ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀಲಕ್ಷ್ಮಿನಾರಾಯಣಸ್ವಾಮಿ ಮತ್ತು ಆಂಜನೇಯಸ್ವಾಮಿಯ ಜೋಡಿ ರಥೋತ್ಸಗಳು ಶ್ರೀರಾಮನವಮಿಯ ದಿನವಾದ ಶುಕ್ರವಾರ ಸಂಜೆ ನಡೆಯಲಿವೆ.

ಜೋಡಿ ರಥೋತ್ಸವದ ಅಂಗವಾಗಿ ಉಭಯ ದೇವಸ್ಥಾನದಲ್ಲಿ ಯುಗಾದಿಯಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿದ್ದು, ಕಿನ್ನಾಳದ ಆಗಮದವರಾದ ಗಂಗೂರ್ ಅವರಿಂದ ವಿವಿಧ ಪೂಜೆ ನಡೆದಿವೆ. ಜೊತೆಗೆ ನಿತ್ಯ ವಿಶೇಷ ಪೂಜೆ ಪುನಸ್ಕಾರ ನಡೆಸಲಾಗುತ್ತಿದೆ.

ಮಂಗಳವಾರ ತಡರಾತ್ರಿ ದೇವಸ್ಥಾನದ ಆವರಣದಲ್ಲಿ ಸೀತಾರಾಮರ ನಿಶ್ಚಿತಾರ್ಥ (ಹನುಮಂತೋತ್ಸವ) ಹಾಗೂ ಬುಧವಾರ ರಾತ್ರಿ ಗರುಡೋತ್ಸವ(ದೇವರ ಲಗ್ನ) ಕಾರ್ಯಕ್ರಮ ನಡೆಯಿತು. ಗುರುವಾರ ಬೆಳಿಗ್ಗೆ ದೇವರ ಬಿಳಿ ಆನೆ ಉತ್ಸವ ಕಾರ್ಯಕ್ರಮ ನಡೆಯಿತು.

ಶುಕ್ರವಾರ ಮಧ್ಯಾಹ್ನ 12ಕ್ಕೆ ಮಡಿ ತೇರು ಎಳೆಯುವ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5ಕ್ಕೆ ಜೋಡಿ ರಥೋತ್ಸವಗಳು ಜರುಗಲಿವೆ. ಇನ್ನು ರಥದ ಅಂತಿಮ ಹಂತದ ಕೆಲಸಗಳು ನಡೆಯುತ್ತಿರುವ ದೃಶ್ಯ ಗುರುವಾರ ಸಂಜೆ ಕಂಡು ಬಂದಿತು. ಇದಕ್ಕಾಗಿ ಈಗಾಗಲೇ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದೆ.

ಕಳೆದ ವರ್ಷ ಭಕ್ತರು ಹಾಗೂ ದಾನಿಗಳ ಸಹಕಾರದಲ್ಲಿ ಸುಮಾರು ₹ 4 ಕೋಟಿ ವೆಚ್ಚದಲ್ಲಿ ನೂತನ ಜೋಡಿಗಳ ರಥಗಳನ್ನು ನಿರ್ಮಿಸಲಾಗಿದ್ದು, ₹ 80 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ನವೀಕರಣ ಮಾಡಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-25-61311690

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.