ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಐತಿಹಾಸಿನ ತುಂಬುಕೆರೆ ಅಭಿವೃದ್ಧಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮುಂದಾಗಿದ್ದು ಪಟ್ಟಣದ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಪಟ್ಟಣದ ಕಲ್ಮೇಶ್ವರ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಕೈಗೊಳ್ಳುತ್ತಿರುವ ತುಂಬುಕೆರೆ ಹೂಳೆತ್ತುವ ಕಾರ್ಯಕ್ಕೆ ಊರಿನ ನಾಗರಿಕರೆಲ್ಲ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಐತಿಹಾಸಿಕ ಕೆರೆ ಅಭಿವೃದ್ಧಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆರೆಯ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ಕೆ ಸ್ಥಳೀಯ ಪಟ್ಟಣ ಪಂಚಾಯಿತಿಯೂ ಯೋಜನೆ ರೂಪಿಸಿದ್ದು, ಕೆರೆ ಪರಿಸರ ಸುಂದರಗೊಳ್ಳಲಿದೆ.

ಇದೇ ಸಭೆಯಲ್ಲಿ ಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಗೌರವ ಅಧ್ಯಕ್ಷರಾಗಿ ಎನ್.ಸಿ.ಗಣಾಚಾರಿ, ಅಧ್ಯಕ್ಷರಾಗಿ ಪ.ಪಂ.ಅಧ್ಯಕ್ಷ ಸುರೇಶ ಮುತ್ನಾಳ, ಉಪಾಧ್ಯಕ್ಷರಾಗಿ ಜಾವೀದ್ ಜಮಾದಾರ ಹಾಗೂ ಇನ್ನುಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಏಪ್ರಿಲ್ ತಿಂಗಳಲ್ಲಿ ಅಭಿವೃದ್ಧಿ ಕಾರ್ಯ ಆರಂಭಿಸುವ ಬಗ್ಗೆ ಯೋಚಿಸಲಾಗಿದೆ.

ಸಭೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಬಿ.ಆರ್.ಯೋಗೀಶ, ವಲಯ ಮೇಲ್ವಿಚಾರಕ ಜನಾರ್ಧನ್, ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿಮಠ, ಅಧ್ಯಕ್ಷ ಸುರೇಶ ಮುತ್ನಾಳ, ಉಪಾಧ್ಯಕ್ಷೆ ಲಕ್ಷ್ಮಿ ನಾಗನೂರ, ಅದೃಶ್ಯಪ್ಪ ಗದ್ದಿಹಳ್ಳಿ, ಎಂ.ಎಸ್.ಕಲ್ಮಠ, ಶಾಂತಲಿಂಗಯ್ಯ ಗೋಣಿಕಾಂತಿಹಿರೇಮಠ, ಸುಭಾನಿ ಅಗಸಿಬಾಗಿಲ, ಸುಶೀಲಾ ಗಣಾಚಾರಿ, ಸಾವಿತ್ರಿನ ಹೊನ್ನಣ್ಣವರ, ಪ್ರಕಾಶ ಗಿರಜಿಮನಿ, ದೇಮಪ್ಪ ಬಸರಗಿ, ಬಸಯ್ಯ ಮೈಸೂರಮಠ ಸೇರಿದಂತೆ ಪಟ್ಟಣದ ನಾಗರಿಕರು, ಸಂಘದ ಸೇವಾ ಪ್ರತಿನಿಧಿಗಳು, ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.