ಹೊಸಪೇಟೆ (ವಿಜಯನಗರ): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಮಂಡಿಸಿರುವ ಬಜೆಟ್ ಹೊಸದು. ಆದರೆ, ವಿಜಯನಗರ ಜಿಲ್ಲೆಯ ಪಾಲಿಗೆ ಇದು ಹಳತು. ಹೊಸ ಬಜೆಟ್ನಲ್ಲಿ ಹಳೆ ಘೋಷಣೆಗಳನ್ನು ಪುನರುಚ್ಚರಿಸಿ ಸಾಕಷ್ಟು ಯೋಜನೆಗಳನ್ನು ಕೊಟ್ಟಿದ್ದೇನೆ ಎಂಬಂತೆ ಬಿಂಬಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳಾಗಿವೆ. ಆದರೆ, ಸತತ ಎರಡನೇ ವರ್ಷವೂ ಬಜೆಟ್ನಲ್ಲಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಬೊಮ್ಮಾಯಿ ಅವರು ಶುಕ್ರವಾರ 159 ಪುಟಗಳ ಸುದೀರ್ಘ ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ ಹತ್ತು ಸಲ ಜಿಲ್ಲೆಯ ಹೆಸರನ್ನು ಉಲ್ಲೇಖಿಸಿದ್ದಾರೆ. ಆದರೆ, ವಿಜಯನಗರ ಸರ್ಕಾರಿ ಆಸ್ಪತ್ರೆಯಲ್ಲಿ 50 ಹಾಸಿಗೆಯ ಕ್ರಿಟಿಕಲ್ ಕೇರ್ ಬ್ಲಾಕ್ ಆರಂಭಿಸುವುದು, ಪ್ರವಾಸಿ ಮಾರ್ಗದರ್ಶಿಗಳ ಪ್ರೋತ್ಸಾಹ ಧನ ಹೆಚ್ಚಿಸಿರುವುದು ಬಿಟ್ಟರೆ ಉಳಿದೆಲ್ಲಾ ಯೋಜನೆಗಳು ಹಳತು. ಹೋದ ವರ್ಷವೂ ಜಿಲ್ಲೆಗೆ ಬಿಡಿಗಾಸೂ ಸಿಕ್ಕಿರಲಿಲ್ಲ.

ಇಷ್ಟೇ ಅಲ್ಲ, ಭವಿಷ್ಯದಲ್ಲಿ ಹೊಸ ಜಿಲ್ಲೆ ಹೇಗಿರಬೇಕು? ಏನೇನು ಸವಲತ್ತು ಬೇಕು? ಅದಕ್ಕೆ ಎಷ್ಟು ಅನುದಾನ ಬೇಕು? ಎಂಬ ಪ್ರಸ್ತಾಪ ಇಲ್ಲ. ಕನಿಷ್ಠ ಹೊಸ ಜಿಲ್ಲೆಯ ಅಭಿವೃದ್ಧಿ ದೂರದೃಷ್ಟಿಯ ವಿಚಾರವೂ ಇಲ್ಲ. ಇದು ಜಿಲ್ಲೆಯನ್ನು ಕಡೆಗಣಿಸಿರುವುದು ಎತ್ತಿ ತೋರಿಸುತ್ತದೆ ಎನ್ನುತ್ತಾರೆ ಸ್ಥಳೀಯರು.

ತುಂಗಭದ್ರಾ ಜಲಾಶಯದಲ್ಲಿ ಹೂಳು ಸಂಗ್ರಹಗೊಂಡು ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿರುವುದರಿಂದ ಕೊಪ್ಪಳದ ನವಲೆ ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ವಿಷಯವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಹುಬ್ಬಳ್ಳಿ–ಹೊಸಪೇಟೆ–ಬಳ್ಳಾರಿ–ಆಂಧ್ರ ಗಡಿ ಹೆದ್ದಾರಿ ಅಭಿವೃದ್ಧಿಗೆ ಅನುಮೋದನೆ ಕೊಡಲಾಗಿದೆ ಎಂದು ಹೇಳಿದ್ದಾರೆ. ಈ ಯೋಜನೆ 2016–17ರಿಂದ ಪ್ರಗತಿಯಲ್ಲಿದೆ. ಹೊಸಪೇಟೆ–ಬಳ್ಳಾರಿ ಹೊರತುಪಡಿಸಿದರೆ ಉಳಿದೆಲ್ಲ ಕಡೆ ಕಾಮಗಾರಿ ಪೂರ್ಣಗೊಂಡಿದೆ. ಹೊಸಪೇಟೆ–ಹುಬ್ಬಳ್ಳಿ–ಲೋಂಡಾ–ವಾಸ್ಕೊ ಡ ಗಾಮ ರೈಲು ಹಳಿ ಡಬ್ಲಿಂಗ್ ಕಾಮಗಾರಿಗೆ ರಾಜ್ಯ ಸರ್ಕಾರದ ಅಗತ್ಯ ಪಾಲು ಕೊಡಲಾಗುವುದು ಎಂದು ತಿಳಿಸಿದ್ದಾರೆ. ಇದರಲ್ಲಿ ಹೊಸತೇನಿಲ್ಲ. ಈಗಾಗಲೇ ಕಾಮಗಾರಿ ಚಾಲ್ತಿಯಲ್ಲಿದೆ.

ಜಿಲ್ಲಾ ಸಮಗ್ರ ಗಣಿಬಾಧಿತ ಪರಿಸರ ಪುನಶ್ಚೇತನ ಅಭಿವೃದ್ಧಿ ಯೋಜನೆಗಳಿಗೆ ಸುಪ್ರೀಂಕೋರ್ಟ್ ಅನುಮೋದನೆ ನೀಡಿದ್ದು, ಈ ಪೈಕಿ ₹4,322 ಕೋಟಿಯನ್ನು ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ 151 ಯೋಜನೆಗಳನ್ನು ಬಳ್ಳಾರಿ, ಚಿತ್ರದುರ್ಗ, ವಿಜಯನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಹಿಂದಿನ ಸರ್ಕಾರದ ಅವಧಿಯಿಂದಲೂ ಈ ಪ್ರಕ್ರಿಯೆ ನಡೆದುಕೊಂಡು ಬಂದಿದ್ದು, ಸರ್ಕಾರವೇ ತಿಳಿಸಿದಂತೆ 2022ರಲ್ಲೇ ಅನುಮೋದನೆ ಸಿಕ್ಕಿದೆ. ಇನ್ನು, ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ್ ದರ್ಶನ್ 2.0 ಅಡಿ ಹಂಪಿ ಸ್ಮಾರಕ ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಇದು ಕೇಂದ್ರದ ಯೋಜನೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಇಲ್ಲ.

ಹಂಪಿಯ ವಿಜಯ ವಿಠಲ ದೇವಾಲಯ ಮತ್ತು ಪುರಂದರ ಮಂಟಪವನ್ನು ಅಭಿವೃದ್ಧಿಗೊಳಿಸಿ, ಅತ್ಯಾಧುನಿಕ ಬೆಳಕಿನ ವ್ಯವಸ್ಥೆ, 3ಡಿ ಪ್ರಾಜೆಕ್ಷನ್ ಮ್ಯಾಪಿಂಗ್ ಮಾಡಲಾಗುವುದು. ಧ್ವನಿ ಮತ್ತು ಬೆಳಕು ಪ್ರದರ್ಶನಕ್ಕೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಈಗಾಗಲೇ ಧ್ವನಿ ಮತ್ತು ಬೆಳಕು ಪ್ರದರ್ಶನ ಕಂಡಾಗಿದೆ. ಇನ್ನು, ಸ್ಮಾರಕಗಳನ್ನು ಯಾವ ರೀತಿ ಅಭಿವೃದ್ಧಿಗೊಳಿಸಲಾಗುವುದು ಎಂಬ ಸ್ಪಷ್ಟತೆ ಇಲ್ಲ.

ಹೊಸಪೇಟೆಯಲ್ಲಿ ಭಾರಿ ವಾಹನ ಚಾಲನೆ ತರಬೇತಿ ಸಂಸ್ಥೆ ಸ್ಥಾಪಿಸಲಾಗುತ್ತಿದೆ ಎಂದು ಸ್ವತಃ ಅವರೇ ಹೇಳಿದ್ದಾರೆ. ಹೀಗಾಗಿ ಇದರಲ್ಲಿ ಹೊಸತೇನೂ ಇಲ್ಲ. ಇನ್ನು, ವಿಜಯನಗರ ಜಿಲ್ಲೆಯ ಗೊಲ್ಲರಹಟ್ಟಿ, ತಾಂಡ, ಕುರುಬರಹಟ್ಟಿ ಹಾಗೂ ಇತರೆ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಿ, ಫಲಾನುಭವಿಗಳಿಗೆ ಪ್ರಧಾನಿ ಮೂಲಕ ಹಕ್ಕುಪತ್ರ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕೆಲಸ ಕೂಡ ಈಗಾಗಲೇ ಆಗಿದೆ. ಇದರಿಂದಾಗಿ ಇದು ಮುನ್ನೋಟವಿಲ್ಲದ ಬಜೆಟ್ ಎಂಬ ಟೀಕೆ ವ್ಯಕ್ತವಾಗಿದೆ. ರಾಜ್ಯದ ಪ್ರವಾಸಿ ತಾಣಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೋಂದಾಯಿತ 398 ಪ್ರವಾಸಿ ಗೈಡ್ಗಳ ಪ್ರೋತ್ಸಾಹ ಧನ ₹2ರಿಂದ ₹5 ಸಾವಿರ ಹೆಚ್ಚಿಸುವ ತೀರ್ಮಾನ ಪ್ರಕಟಿಸಿದ್ದಾರೆ. ಹಂಪಿಯಲ್ಲಿ 151 ಗೈಡ್ಗಳು ಇರುವುದರಿಂದ ಸ್ಥಳೀಯರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.

ಬಜೆಟ್ನಲ್ಲಿ ಜಿಲ್ಲೆಗೆ ಸಿಕ್ಕಿದ್ದೇನು?

* ನವಲೆ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಯೋಜನಾ ವರದಿ ಸಿದ್ಧ. ಆಂಧ್ರ, ತೆಲಂಗಾಣ ಸಿ.ಎಂ. ಜತೆ ಚರ್ಚಿಸಿ ಯೋಜನೆ ಅನುಷ್ಠಾನ

* ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ 50 ಹಾಸಿಗೆಯ ಕ್ರಿಟಿಕಲ್ ಕೇರ್ ಬ್ಲಾಕ್ ಆರಂಭ

* ₹2,200 ಕೋಟಿಯಲ್ಲಿ ಹುಬ್ಬಳ್ಳಿ–ಹೊಸಪೇಟೆ–ಬಳ್ಳಾರಿ–ಆಂಧ್ರ ಗಡಿ ಹೆದ್ದಾರಿ ಅಭಿವೃದ್ಧಿಗೆ ಅನುಮೋದನೆ

* ಹೊಸಪೇಟೆ–ಹುಬ್ಬಳ್ಳಿ–ಲೋಂಡಾ–ವಾಸ್ಕೊ ಡ ಗಾಮ ರೈಲು ಹಳಿ ಡಬ್ಲಿಂಗ್ ಕಾಮಗಾರಿ ರಾಜ್ಯ ಸರ್ಕಾರದ ಅಗತ್ಯ ಪಾಲು

* 2018ರಿಂದ ನನೆಗುದಿಗೆ ಬಿದ್ದಿದ್ದ ಜಿಲ್ಲಾ ಸಮಗ್ರ ಗಣಿಬಾಧಿತ ಪರಿಸರ ಪುನಶ್ಚೇತನ ಅಭಿವೃದ್ಧಿ ಯೋಜನೆಗಳನ್ನು ನಮ್ಮ ಸರ್ಕಾರವು ನಿರಂತರ ಪ್ರಯತ್ನದಿಂದ 2022ರ ಏಪ್ರಿಲ್ನಲ್ಲಿ ₹24,997 ಕೋಟಿಗಳ ಯೋಜನೆಗೆ ಸುಪ್ರೀಂಕೋರ್ಟ್ ಅನುಮೋದನೆ ನೀಡಿದೆ. ಈ ಪೈಕಿ ₹4,322 ಕೋಟಿ ಮೊತ್ತದ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ 151 ಯೋಜನೆಗಳಿಗೆ ಮೇಲ್ವಿಚಾರಣಾ ಪ್ರಾಧಿಕಾರವು ಅನುಮೋದನೆ ನೀಡಿದ್ದು, ಅದರ ಅನುಷ್ಠಾನ

* ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ್ ದರ್ಶನ್ 2.0 ಅಡಿ ಹಂಪಿ ಸ್ಮಾರಕ ಅಭಿವೃದ್ಧಿ

* ಪ್ರವಾಸಿ ಗೈಡ್ಗಳ ಪ್ರೋತ್ಸಾಹ ಧನ ₹2ರಿಂದ ₹5 ಸಾವಿರ ಹೆಚ್ಚಳಕ್ಕೆ ನಿರ್ಧಾರ

* ಹಂಪಿಯ ವಿಜಯ ವಿಠಲ ದೇಗುಲ ಮತ್ತು ಪುರಂದರ ಮಂಟಪ ಅಭಿವೃದ್ಧಿ. ಅತ್ಯಾಧುನಿಕ ಬೆಳಕಿನ ವ್ಯವಸ್ಥೆ, 3ಡಿ ಪ್ರಾಜೆಕ್ಷನ್ ಮ್ಯಾಪಿಂಗ್, ಧ್ವನಿ ಮತ್ತು ಬೆಳಕು ಪ್ರದರ್ಶನ ಅಳವಡಿಕೆ, ವಿಜಯಪುರ, ಚಿಕ್ಕಬಳ್ಳಾಪುರ, ಬೆಳಗಾವಿ, ಬೀದರ್, ಬಾಗಲಕೋಟೆ ಜಿಲ್ಲೆಗಳ ಸ್ಮಾರಕಗಳ ಅಭಿವೃದ್ಧಿ ಒಳಗೊಂಡಂತೆ ಒಟ್ಟು ₹60 ಕೋಟಿ ಮೀಸಲು

* ಜಿಲ್ಲೆಯ ತಾಂಡ, ಗೊಲ್ಲರಹಟ್ಟಿ, ಕುರುಬರಹಟ್ಟಿ ಮತ್ತು ಇತರೆ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಿ, ಫಲಾನುಭವಿಗಳಿಂದ ಹಕ್ಕುಪತ್ರ ವಿತರಿಸಲಾಗಿದೆ

* ಹೊಸಪೇಟೆಯಲ್ಲಿ ₹80 ಕೋಟಿಯಲ್ಲಿ ಭಾರಿ ವಾಹನ ಚಾಲನೆ ತರಬೇತಿ ಸಂಸ್ಥೆ ಸ್ಥಾಪಿಸಲಾಗುತ್ತಿದೆ

ನಿರೀಕ್ಷೆಗಳೇನಿತ್ತು?

* ಹೊಸ ಜಿಲ್ಲೆಯಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನ

* ವಿವಿಧ ಇಲಾಖೆಗಳ ಕಚೇರಿ ಸ್ಥಾಪನೆ

* ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ನೇಮಕಾತಿ

* ಮೆಡಿಕಲ್ ಕಾಲೇಜು ಸ್ಥಾಪನೆ

* ಕೃಷಿ ಕಾಲೇಜು ಸ್ಥಾಪನೆ

* ಹಂಪಿಯಲ್ಲಿ ಮೂಲಸೌಕರ್ಯಕ್ಕೆ ವಿಶೇಷ ಯೋಜನೆ ಘೋಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.