ಕೂಡ್ಲಿಗಿ: ತಾಲ್ಲೂಕಿನಲ್ಲಿ ಭಾಕಿ ಉಳಿದಿರುವ ಪಡಿತರ ಚೀಟಿಗಳನ್ನು ಇ-ಕೆವೈಸಿ ಮಾಡಿಸಿಕೊಳ್ಳುವಂತೆ ತಹಶೀಲ್ದಾರ್ ಎಂ. ರೇಣುಕಾ ಅವರು ಪಡಿತರ ಚೀಟಿದಾರರಿಗೆ ಸೂಚನೆ ನೀಡಿದ್ದಾರೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ನೀಡಿರುವ ಪಡಿತರ ಚೀಟಿಗಳನ್ನು ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಸಾಕಷ್ಟು ಪ್ರಚಾರ ಕೈಗೊಂಡು, ಅರಿವು ಮೂಡಿಸಿದ್ದರು, ತಾಲ್ಲೂಕಿನಲ್ಲಿ 8006 ಫಲಾನುಭವಿಗಳ ಪಡಿತರ ಚೀಟಿ ಇ-ಕೆವೈಸಿ ಮಾಡಿಸಲು ಬಾಕಿ ಉಳಿದುಕೊಂಡಿವೆ.
ಈ ಕುರಿತು ಸರ್ಕಾರದ ಕಾರ್ಯದರ್ಶಿಗಳ ನಿರ್ದೇಶನದಂತೆ ಅಗಸ್ಟ್ 31 ಇ- ಕೆವೈಸಿ ಮಾಡಿಸಲು ಕೊನೆ ದಿನವಾಗಿರುತ್ತದೆ. ಈ ಅವಧಿಯನ್ನು ನಂತರ ಬಾಕಿ ಉಳಿದಿರುವ ಪಡಿತರ ಚೀಟಿಯ ಫಲಾನುಭವಿಗಳನ್ನು ಅನರ್ಹರೆಂದು ಪರಿಗಣಿಸಿ, ಪಡಿತರ ಚೀಟಿಗಳನ್ನು ತಗೆದು ಹಾಕಲಾಗುವುದು ಎಂದು ತಿಳಿಸಿರುವ ಅವರು, ತಾಲ್ಲೂಕಿನಲ್ಲಿ ಭಾಕಿ ಉಳಿದಿರುವ ಫಲಾನುಭವಿಗಳು ನಿಗದಿತ ದಿನದೊಳಗೆ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಮಾನವಿ ಮಾಡಿದ್ದಾರೆ.