ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾನಪದ ಕಲೆ, ಸಂಸ್ಕೃತಿ ಉಳಿಯಬೇಕು’

Last Updated 5 ನವೆಂಬರ್ 2022, 14:14 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ನಾಡಿನ ಶ್ರೀಮಂತ ಜಾನಪದ ಕಲೆಗಳು, ಸಂಸ್ಕೃತಿ ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕಿದೆ’ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಉಪಕುಲಸಚಿವ ಪ್ರಶಾಂತ್‌ ಕುಮಾರ್‌ ತಿಳಿಸಿದರು.

ಬಳ್ಳಾರಿಯ ಸತ್ಯಂ ಬಿಇಡಿ ಕಾಲೇಜು, ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ವಿಶೇಷ ಘಟಕ ಯೋಜನೆಯಡಿ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಡಿನ ಜಾನಪದ ಕಲೆಗಳಿಗೆ ಅದರದೇ ಆದ ಇತಿಹಾಸ, ಸಂಸ್ಕೃತಿ ಇದೆ. ಆ ಶ್ರೀಮಂತ ಪರಂಪರೆಗಳಿಗೆ ಮೌಲ್ಯಯುತವಾಗಿದ್ದು, ಅವುಗಳನ್ನು ಉಳಿಸಬೇಕಿದೆ ಎಂದು ತಿಳಿಸಿದರು.

ಪ್ರಾಧ್ಯಾಪಕರಾದ ವಿ. ರಾಮಾಂಜನೇಯ, ಎಂ.ವಿ. ಜಯದೇವಯ್ಯ, ಆಲಂ ಬಾಷ, ಶ್ರೀಕಾಂತ್ ಮುನಿ, ರೆಡ್ಡಿ ಹಳ್ಳಿ ಗಿರಿಜಾ, ನೀಲಕಂಠ ಕೆ. ಇದ್ದರು. ಹಗಲುವೇಷ ಕಲಾಪ್ರಕಾರದ ಶೂರ್ಪನಖಿ ಗರ್ವಭಂಗ ಎಂಬ ಪೌರಾಣಿಕ ನಾಟಕ, ಶ್ರೀ ಭೀಮಾಂಜಿನೇಯ ಯುದ್ಧ ನಾಟಕ, ಬುರ್ರಕಥಾ, ಜಾನಪದ ಗೀತ ಗಾಯನ, ಜಾನಪದ ನೃತ್ಯ ಕಲೆ ಪ್ರದರ್ಶನ ನಡೆಯಿತು. ಪ್ರಾಧ್ಯಾಪಕರಾದ ಪ್ರಶಾಂತ್ ಕುಮಾರ್, ಕಲಾವಿದ ಅಶ್ವ ರಾಮಣ್ಣ, ಬುರ್ರಕಥಾ ಶಿವಮ್ಮ, ಹಗಲುವೇಷ ಕಲಾವಿದ ಚಿನ್ನಸ್ವಾಮಿ ಕುರುಗೋಡು ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT