ಸಿರುಗುಪ್ಪ: ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ತಾಲ್ಲೂಕು ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಶಾಸಕ ಬಿ.ಎಂ. ನಾಗರಾಜ ಮನೆ ಎದುರು ಶುಕ್ರವಾರ ಧರಣಿ ನಡೆಸಲಾಯಿತು.

ನಗರದ ಎಪಿಎಂಸಿ ಆವರಣದಿಂದ ಶಾಸಕರ ಮನೆವರೆಗೆ ತಮಟೆ ಚಳವಳಿ ಮೂಲಕ ಮೆರವಣಿಗೆ ನಡೆಸಲಾಯಿತು.

ಒಳ ಮೀಸಲಾತಿ ಅನ್ವಯಿಸದೆ 56 ಸಾವಿರ ಉದ್ಯೋಗಗಳ ಭರ್ತಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದು ಮಾದಿಗ ಸಂಬಂಧಿತ ಸಮುದಾಯಗಳ ಪಾಲಿನ ಮರಣ ಶಾಸನವಾಗುತ್ತದೆ. ಕೂಡಲೇ ಸರ್ಕಾರ ತನ್ನ ನಿರ್ಧಾರ ಬದಲಿಸಬೇಕೆಂದು ಒತ್ತಾಯಿಸಿದರು.

ಉದ್ಯೋಗ ಮತ್ತು ಶಿಕ್ಷಣದಲ್ಲಿ ಒಳ ಮೀಸಲಾತಿಯನ್ನು ಮಾದಿಗರ ಜನಸಂಖ್ಯೆ ಹಾಗೂ ಹಿಂದುಳಿಯುವಿಕೆಯ ಆಧಾರದ ಮೇಲೆ ಎಲ್ಲಾ ಆಯೋಗಗಳ ಶಿಫಾರಸ್ಸಿನಂತೆ ಮಾದಿಗರಿಗೆ ಶೇ 6ರಷ್ಟು ಪ್ರಮಾಣದ ಮೀಸಲಾತಿಯನ್ನು ಹಂಚಿಕೆ ಮಾಡಿ ಪರಿಶಿಷ್ಟ ಜಾತಿ (ಪ್ರವರ್ಗ– ಎ) ಎಂದು ಘೋಷಣೆ ಮಾಡಿದೆ. ಮಾದಿಗರ ಬಹು ವರ್ಷಗಳ ಬೇಡಿಕೆಯಾದ ಒಳ ಮೀಸಲಾತಿಯನ್ನು ಶಾಸನ ಬದ್ಧವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿಯ ಸಂಪೂರ್ಣ ಒಳಮೀಸಲಾತಿ ಜಾರಿ ಮಾಡುವಂತೆ ಹಾಗೂ 5,64,32 ಹುದ್ದೆಗಳ ಭರ್ತಿಯಲ್ಲಿ ಒಳಮೀಸಲಾತಿ ಅಡಿಯಲ್ಲಿ ಶೇ 17ರಷ್ಟು ಮೀಸಲಾತಿ ನಿಗದಿ ಅಡಿಯಲ್ಲಿ ಭರ್ತಿ ಮಾಡುವಂತೆ ಅಧಿವೇಶನದಲ್ಲಿ ಶಾಸಕರು ಮಾದಿಗ ಸಮಾಜದ ಪರವಾಗಿ ಧ್ವನಿ ಎತ್ತುವಂತೆ ಒತ್ತಾಯಿಸಿದರು.

ಪ್ರತಿಭಟನೆ ನಡೆದ ಶಾಸಕರ ಆಪ್ತಸಹಾಯಕರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಎಚ್.ಬಿ. ಗಂಗಪ್ಪ, ರಾಮಪ್ಪ, ಮುನಿಸ್ವಾಮಿ, ಮೇಕೇಲಿ ವೀರೇಶ, ಚಿದಾನಂದ ರಾಯುಡು, ಮಾರೇಶ, ದರಗಪ್ಪ, ಮಹಾದೇವ, ನಂದೀಶ, ಎಚ್.ಕೆ. ಬಸವರಾಜ, ಭಂಡಾರಿ, ಬಿ.ಟಿ.ಆನಂದ, ಶಿವಕುಮಾರ, ನಾಗಲಿಂಗಪ್ಪ, ಎಚ್.ಕೆ ಸುರೇಶ, ಕೊಡ್ಡೆ ಧರ್ಮರಾಜ, ಹನುಮಂತಪ್ಪ, ದುರುಗಪ್ಪ, ಮುದೇನೂರು ವೀರೇಶ, ಬಿ.ಹನುಮೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.