ಕೊಟ್ಟೂರು: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ಖರೀದಿ ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರೈತರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಖರೀದಿ ಕೇಂದ್ರ ತೆರೆದರೆ ಸರ್ಕಾರದ ಉದ್ದೇಶ ಈಡೇರದಿರುವುದು ಖರೀದಿ ಕೇಂದ್ರದ ನಿರ್ವಹಣೆ ನೋಡಿಕೊಳ್ಳುವವರ ನಿರ್ಲಕ್ಷತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕೊಟ್ಟೂರಿನಲ್ಲಿ ರಾಗಿ ಸಂಗ್ರಹಣೆಗೆ ಉಗ್ರಾಣ ಕೊರತೆ ಇರುವುದರಿಂದ ಖರೀದಿಸಿದ ರಾಗಿಯನ್ನು ಹರಿಹರದ ಉಗ್ರಾಣಕ್ಕೆ ಸಾಗಿಸಲು ಕೊಪ್ಪಳದ ಹಮಾಲ ಟ್ರಾನ್ಸ್ ಪೋರ್ಟ್ ನವರಿಗೆ ಗುತ್ತಿಗೆ ನೀಡಿದೆ. ಕೊಟ್ಟೂರು ಕೇಂದ್ರದಲ್ಲಿ 2700 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು ಸಾಗಾಣಿಕೆಗೆ ದಿನ ನಿತ್ಯ 8 ರಿಂದ 10 ಲಾರಿಗಳ ಅವಶ್ಯಕತೆ ಇದೆ. ಆದರೆ ಗುತ್ತಿಗೆದಾರರು ದಿನಕ್ಕೆ ಐದು ಲಾರಿಗಳನ್ನು ಮಾತ್ರ ಸಾಗಾಟಕ್ಕೆ ಕಳಿಸುತ್ತಿದ್ದು ಚಾಲಕರು ಹಾಗೂ ಹಮಾಲರ ಸಮಸ್ಯಯಿಂದ ಖರೀದಿ ಕಾರ್ಯ ಚುರುಕು ಪಡೆಯದೆ ರೈತರು ನಾಲ್ಕೈದು ದಿನಗಳ ಕಾಲ ವಾಹನಗಳ ಸಮೇತ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಖರೀದಿ ಕೇಂದ್ರದವರು ತೂಕ ಮಾಡಿದ ರಾಗಿಯನ್ನು ಲಾರಿ ಲೋಡ್ ಮಾಡಿಕೊಂಡು ಹೋಗುವವರಿಗೂ ಬೇರೆ ರೈತರಿಂದ ರಾಗಿಯನ್ನ ಖರೀದಿಸುವುದಿಲ್ಲ ಈ ಎಲ್ಲಾ ಸಮಸ್ಯೆಗಳಿಂದ ರೈತರು ಬಳಲುವಂತಾಗಿದೆ. ಖರೀದಿ ಕೇಂದ್ರದ ಬಳಿ ಕಳೆದ ನಾಲ್ಕೈದು ದಿನಗಳಿಂದ ಕಾಯುತ್ತಿರುವುದರಿಂದ ವಾಹನ ಬಾಡಿಗೆ ಹಾಗೂ ಉಟೋಪಚಾರ ಮುಂತಾದ ಖರ್ಚುಗಳಿಂದ ನಮಗೆ ದೊರೆಯುವ ಲಾಭವು ಅಷ್ಟ ಕಷ್ಟೆ ಎಂದು ಹಾರಕನಾಳ್ ಗ್ರಾಮದ ರೈತ ಪಿ.ಎಂ.ವೀರಭದ್ರಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನೋಂದಣಿ ಮಾಡಿದ ಎಲ್ಲಾ ರೈತರ ರಾಗಿಯನ್ನ ಮೇ 31 ರವರೆಗೆ ಖರೀದಿಸುವೆವು ರೈತರಿಗೆ ಟೋಕನ್ ಕೊಟ್ಟಿದ್ದೇವೆ ಆ ರೀತಿ ಬಂದರೆ ಕಾಯುವ ಸಮಸ್ಯೆ ಎದುರಾಗಲ್ಲ ಎಂದು ಖರೀದಿ ಕೇಂದ್ರದ ಕೊಟ್ರೇಶಗೌಡ ತಿಳಿಸಿದರು.

ಖರೀದಿ ಕೇಂದ್ರದ ಸಮಸ್ಯಯನ್ನು ಶೀಘ್ರದಲ್ಲಿ ಪರಿಹರಿಸಿ ರೈತರಿಗೆ ಅನುಕೂಲ ಕಲ್ಪಿಸುವುದಾಗಿ ತಹಶೀಲ್ದಾರ್ ಜಿ.ಕೆ.ಅಮರೀಶ್ ಹೇಳಿದರು. ಖರೀದಿ ಕೇಂದ್ರದ ಬಳಿ ಕಾಯುವಂತ ಸ್ಥಿತಿ ನಿರ್ಮಾಣವಾಗಿದೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಅನುಕುಲ ಕಲ್ಪಿಸಿಕೊಡಬೇಕೆಂಬುದು ರೈತರ ಒತ್ತಾಸೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.