ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಗಾಳಿ‌ ಸಹಿತ ಮಳೆ: ಮೆಕ್ಕೆಜೋಳ ಬೆಳೆ ಹಾನಿ

Published : 15 ಆಗಸ್ಟ್ 2024, 15:24 IST
Last Updated : 15 ಆಗಸ್ಟ್ 2024, 15:24 IST
ಫಾಲೋ ಮಾಡಿ
Comments

ಸಂಡೂರು: ಬುಧವಾರ ರಾತ್ರಿ ಸುರಿದ ಗಾಳಿಸಹಿತ ರಭಸವಾದ ಮಳೆಗೆ ತಾಲ್ಲೂಕಿನ ಭುಜಂಗನಗರ, ಕೃಷ್ಣಾನಗರ, ಲಕ್ಷ್ಮಿಪುರದ ಅನೇಕ ರೈತರು ಬೆಳೆದಿದ್ದ ಮೆಕ್ಕೆಜೋಳದ ಬೆಳೆ ಬಹುತೇಕ ನೆಲಸಮವಾಗಿವೆ.

ರಾತ್ರಿ 9.55ರಿಂದ ಆರಂಭಗೊಂಡ ಮಳೆಯ ಜೊತೆಗೆ ಭಾರೀ ಗಾಳಿ ಬೀಸಿದೆ. ಸುಮಾರು ಅರ್ಧಗಂಟೆ ಮಳೆ ಬಂದಿದ್ದು ಈಗ ತಾನೇ ತೆನೆ ಬಿಟ್ಟ ಮೆಕ್ಕೆಜೋಳ ನೆಲಕ್ಕುರುಳಿದೆ.

ಕೃಷ್ಣಾನಗರದ ಕುರುಬರ ಶಂಕ್ರಮ್ಮ, ಮುದುಕಪ್ಪನವರ ಕುಮಾರಸ್ವಾಮಿ, ಹರಿಜನ ಕೆಂಚಪ್ಪ, ಕರಿಲಿಂಗಪ್ಪ, ಪುಣ್ಯೋಜಿ ರಾವ್, ದೊಡ್ಡ ಚಿನ್ನೂರಪ್ಪ, ಸುಶೀಲಮ್ಮ ಸೇರಿದಂತೆ ಹಲವರ ಜಮೀನುಗಳಿಗೆ ಹಾನಿಯಾಗಿದೆ.

ಕೃಷ್ಣಾನಗರ ಗ್ರಾಮ ಲೆಕ್ಕಾಧಿಕಾರಿ ಭುವನೇಶ್ವರಿ ಹಾನಿಗೊಳಗಾದ‌ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸಂಡೂರು ಹೋಬಳಿಯಲ್ಲಿ 2.1 ಸೆಂ.ಮೀ, ಚೋರನೂರು ಹೋಬಳಿಯಲ್ಲಿ 1.5 ಸೆಂ.ಮೀ ಮಳೆ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT