ಸಂಡೂರು ತಾಲ್ಲೂಕಿನ ತಹಶೀಲ್ದಾರ್ ಜಿ.ಅನಿಲ್‍ಕುಮಾರ್ ಮಾತನಾಡಿ ‘ಪ್ರಸ್ತುತ ದಿನಗಳಲ್ಲಿ ರಾಜ್ಯ ಸರ್ಕಾರವು ಪ್ಲಾಸ್ಟಿಕ್ ವಸ್ತುಗಳ ಮಾರಾಟ, ಬಳಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದು, ಕೆಲವು ಅಂಗಡಿ, ಮಳಿಗೆಗಳ ಮಾಲಿಕರು ಅಕ್ರಮವಾಗಿ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡುವುದು ಸರಿಯಲ್ಲ. ಅಂಗಡಿಗಳ ನಾಮಫಲಕಗಳ ಮೇಲೆ ಕಡ್ಡಾಯವಾಗಿ ಕನ್ನಡ ಬರಹದ ನಾಮ ಫಲಕಗಳನ್ನು ಅಳವಡಿಸಬೇಕು’ ಎಂದರು.