ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ: ಲಂಚ ಪಡೆಯುವಾಗ ಆರ್‌ಟಿಒ ಸಿಬ್ಬಂದಿ ಸೆರೆ

Published : 14 ಆಗಸ್ಟ್ 2024, 16:23 IST
Last Updated : 14 ಆಗಸ್ಟ್ 2024, 16:23 IST
ಫಾಲೋ ಮಾಡಿ
Comments

ಬಳ್ಳಾರಿ: ಚಾಲನಾ ಪರವಾನಗಿ ನವೀಕರಣಕ್ಕೆ ₹1 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಪ್ರಾದೇಶಿಕ ಸಾರಿಗೆ ಕಚೇರಿಯ ಪ್ರಥಮ ದರ್ಜೆ ಸಹಾಯಕ ನಾಗೇಶ್‌ ಕುಮಾರ್‌ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. 

ನಗರದ ಮೊಹಮದ್‌ ಪುರ್ಕಾನ್‌ ಎಂಬುವವರು ತಮ್ಮ ಚಾಲನಾ ಪರವಾನಗಿಯ ನವೀಕರಣಕ್ಕಾಗಿ ಅರ್ಜಿ ಹಾಕಿದ್ದರು. ಇದನ್ನು ಮಾಡಿಕೊಡಲು ನಾಗೇಶ್‌ ಲಂಚ ಅಪೇಕ್ಷಿಸಿದ್ದರು ಎನ್ನಲಾಗಿದ್ದು, ಈ ಕುರಿತು ಮೊಹಮದ್‌ ಪುರ್ಕಾನ್‌ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು. 

ಬುಧವಾರ ಲಂಚದ ಹಣ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ನಾಗೇಶನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂದ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದು, ಕಾನೂನು ಕ್ರಮ ಜರುಗಿಸಿದ್ದಾರೆ. 

ಕೆಲ ದಿನಗಳ ಹಿಂದೆ ನಗರದ ಡ್ರೈವಿಂಗ್‌ ಸ್ಕೂಲ್‌ಗಳ ಮಾಲೀಕರು ಮತ್ತು ನಾಗೇಶ್‌ ಕುಮಾರ್‌ ನಡುವೆ ಗಲಾಟೆ ನಡೆದಿತ್ತು. ಈ ಬಗ್ಗೆ ಬ್ರೂಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ಪ್ರತಿದೂರುಗಳು ದಾಖಲಾಗಿದ್ದವು.

‘ಡಿಜಿಟಲ್‌ ಚಾಲನ ಪರವಾನಗಿಗಳನ್ನು ಖುದ್ದಾಗಿ ಅಭ್ಯರ್ಥಿಗಳ ಕೈಗೆ ಕೊಡದೇ, ಅಂಚೆ ಮೂಲಕ ಕಳುಹಿಸಲಾಗುತ್ತಿತ್ತು. ಇದರಿಂದ ಅಭ್ಯರ್ಥಿಗಳಿಗೆ ಚಾಲನ ಪರವಾನಗಿ ದೊರೆಯುವುದು ವಿಳಂಬವಾಗುತ್ತಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ನಾಗೇಶ್‌ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು’ ಎಂದು ಡ್ರೈವಿಂಗ್‌ ಸ್ಕೂಲ್‌ ಮಾಲೀಕರು ದೂರಿದ್ದರು. 

‘ಚಾಲನಾ ಪರವಾನಗಿಯನ್ನು ನಿಯಮಗಳ ಪ್ರಕಾರ ಅಂಚೇ ಮೂಲಕವೇ ಅರ್ಜಿದಾರರಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದಾಗ ಡ್ರೈವಿಂಗ್‌  ಸ್ಕೂಲ್‌ ಮಾಲೀಕರು ಹಲ್ಲೆ ಮಾಡಿದ್ದರು’ ಎಂದು ನಾಗೇಶ್‌ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT