ಸಂಡೂರು: ಸಂಡೂರಿನಲ್ಲಿ ಈಚೆಗೆ ನಡೆದ ಅಪಘಾತವು ಪಟ್ಟಣದ ಆರೋಗ್ಯ ಸೌಕರ್ಯ ಮತ್ತು ಸೇವೆ ಲಭ್ಯತೆಯನ್ನು ಪ್ರಶ್ನೆ ಮಾಡುತ್ತಿದೆ. ಈ ಅಪಘಾತದಲ್ಲಿ ಗರ್ಭಿಣಿಯೂ ಸೇರಿದಂತೆ ಒಂದೇ ಕುಟುಂಬದ ಐವರು ಮೃತಪಟ್ಟಿದ್ದರು.

ಪಟ್ಟಣದ 100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆಯಲ್ಲೇ ಸ್ಕ್ಯಾನಿಂಗ್ ಸವಲತ್ತು ಸಿಕ್ಕಿದ್ದರೆ ಬಡಕುಟುಂಬವೊಂದು ದೂರದ ಹೊಸಪೇಟೆಗೆ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ. ಇಂಥ ಅವಘಡವೇ ಸಂಭವಿಸುತ್ತಿರಲಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಪಟ್ಟಣದ ಆಸ್ಪತ್ರೆಗೆ ತಾಲ್ಲೂಕಿನ ನೂರಾರು ಗರ್ಭೀಣಿಯರು ಆರೋಗ್ಯ ತಪಾಸಣೆಗೆ ನಿತ್ಯ ಬರುತ್ತಾರೆ. ಆದರೆ ಸ್ತ್ರೀರೋಗ ತಜ್ಞರು, ಸ್ಕ್ಯಾನಿಂಗ್ ಯಂತ್ರದ ಸಮಸ್ಯೆಯಿಂದ ಮಹಿಳೆಯರು ಬಳ್ಳಾರಿ, ಹೊಸಪೇಟೆ, ಕೊಪ್ಪಳ ಮತ್ತಿತರ ದೂರದ ನಗರಗಳಲ್ಲಿನ ಖಾಸಗಿ ಆಸ್ಪತ್ರೆಗಳಿಗೆ ತೆರಳುವಂತಾಗಿದೆ.

ಆಸ್ಪತ್ರೆಗೆ 2023ರಲ್ಲಿ ಸಿಎಸ್ಆರ್ ಅನುದಾನದಲ್ಲಿ ನೂತನ ಸ್ಕ್ಯಾನಿಂಗ್ ಯಂತ್ರವೇನೋ ದೊರಕಿದೆ. ಆದರೆ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ಗಳು ಲಭ್ಯರಿಲ್ಲ. ಹೀಗಾಗಿ ಯಂತ್ರ ಇದ್ದರೂ ಸವಲತ್ತು ದೊರೆಯದಂತಾಗಿದೆ.

ಬಳ್ಳಾರಿ ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನ, ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ, ಕಲ್ಯಾಣ ಕರ್ನಾಟಕ ಅನುದಾನ ಸೇರಿದಂತೆ, ರಾಜ್ಯ, ಕೇಂದ್ರ ಸರ್ಕಾರದ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಲಭ್ಯವಿದ್ದರೂ, ಕ್ಷೇತ್ರದ ಜನಪ್ರತಿನಿಧಿಗಳ, ಜಿಲ್ಲಾಡಳಿತದ ಇಚ್ಛಾಶಕ್ತಿಯ ಕೊರೆತೆಯಿಂದ ತಾಲ್ಲೂಕು ಆಸ್ಪತ್ರೆಯಲ್ಲಿ ಸೇವೆ ದುರ್ಬರ ಎಂಬಂತಾಗಿದೆ.

ಸ್ತ್ರೀರೋಗ ತಜ್ಞರ ಕೊರೆತೆ ಸ್ಕ್ಯಾನಿಂಗ್ ಸಮಸ್ಯೆ ಹಾಗೂ ಆಸ್ಪತ್ರೆಗೆ ಸಿಬ್ಬಂದಿ ಅಗತ್ಯವಿರುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ
ಡಾ.ಭರತ್ ಕುಮಾರ್ ಸಂಡೂರು ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ

ಇಲ್ಲೇ ಸ್ಕ್ಯಾನಿಂಗ್ ಸವಲತ್ತು ಸಿಕ್ಕಿದ್ದರೆ ನಮ್ಮ ಕುಟುಂಬ ಅಪಘಾತಕ್ಕೆ ಒಳಗಾಗುತ್ತಿರಲಿಲ್ಲ. ಈ ಅನ್ಯಾಯ ಬೇರಾವ ಕುಟುಂಬಕ್ಕೂ ಆಗಬಾರದು
ಲಕ್ಷ್ಮಮ್ಮ ಅಪಘಾತದಲ್ಲಿ ಮೃತಪಟ್ಟ ಯುವಕನ ತಾಯಿ

ಇಳಿ ವಯಸ್ಸಲ್ಲಿ ಅನಾಥರಾದರು

ಅಪಘಾತದಲ್ಲಿ ಮೃತಪಟ್ಟ ಕಾರು ಚಾಲಕ ನಂದೀಶ್ ಅವರ ತಂದೆ 20 ವರ್ಷಗಳಿಂದ ಆನಾರೋಗ್ಯ ಪೀಡಿತರಾಗಿದ್ದು ಹಾಸಿಗೆ ಹಿಡಿದಿದ್ದಾರೆ. ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಈಗ ಮಗನೂ ಇಲ್ಲವಾಗಿ ದಂಪತಿ ಇಳಿ ವಯಸ್ಸಿನಲ್ಲಿ ಅನಾಥವಾದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.