ಬಳ್ಳಾರಿ: ಸಂಡೂರು ತಾಲ್ಲೂಕಿನ ವರ್ಜಿನ್ ಅರಣ್ಯದ (ನೈಸರ್ಗಿಕ ಅರಣ್ಯ ಪ್ರದೇಶ) ರಕ್ಷಣೆಗೆ ಕ್ರಮವಹಿಸಲು ಕೇಂದ್ರದ ಪರಿಸರ, ಅರಣ್ಯ ಸಚಿವಾಲಯವು ಈಚೆಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
ದೇವದಾರಿ, ಹದ್ದಿನಪಡೆ, ಕಮಟೂರು ಶ್ರೇಣಿ ಸೇರಿ ಸಂಡೂರಿನ ಒಟ್ಟು ವರ್ಜಿನ್ ಅರಣ್ಯ ರಕ್ಷಣೆಗೆ ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಡಾ ಸದಾನಂದ ಹೆಗ್ಗದಾಳ್ ಮಠ ಜುಲೈ 7ರಂದು ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದರು.
ರಾಷ್ಟ್ರಪತಿ ಕಚೇರಿಯ ಸೂಚನೆಯಂತೆ ಕೇಂದ್ರ ಅರಣ್ಯ ಸಚಿವಾಲಯವು ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದೆ.
ಸದಾನಂದ ಅವರ ಪತ್ರವನ್ನು ಪರಿಶೀಲಿಸಿ, ಸದ್ಯ ಅಸ್ತಿತ್ವದಲ್ಲಿರುವ ನಿಯಮಗಳ ಅನ್ವಯ ಕ್ರಮವಹಿಸಬೇಕು. ಕೈಗೊಂಡ ಕ್ರಮಗಳ ಬಗ್ಗೆ ಸಚಿವಾಲಯ ಮತ್ತು ಅರ್ಜಿದಾರರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದೆ.
ಸಂಡೂರಿನ ದೇವದಾರಿಯಲ್ಲಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್) ಗಣಿಗಾರಿಕೆಗೆ ತಾತ್ಕಾಲಿಕ ತಡೆ ನೀಡಿದೆ. ಅದೇ ಕಂಪನಿ ಹದ್ದಿನಪಡೆ ಅರಣ್ಯ ಶ್ರೇಣಿಯಲ್ಲಿ ಅದಿರು ಶೋಧನೆ ನಡೆಸುತ್ತಿದೆ.