ಸಂಡೂರು: ಕುಡುತಿನಿ, ಸುತ್ತಲಿನ ಗ್ರಾಮಗಳ ಭೂ ಸಂತ್ರಸ್ತರನ್ನು ಬಂಧಿಸಿರುವದನ್ನು ಖಂಡಿಸಿ ಸಿಪಿಎಂ ಪಕ್ಷದ ಮುಖಂಡರು ತೋರಣಗಲ್ಲು ನಾಡಕಚೇರಿ ಅಧಿಕಾರಿ ಮಂಜುಲತಾ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯಸ್ವಾಮಿ ಮಾತನಾಡಿ, ‘ಕೆಐಎಡಿಬಿಯು ಖಾಸಗಿ ಕಂಪನಿಗಳಿಗಾಗಿ 5365 ಎಕರೆಗೂ ಹೆಚ್ಚು ಜಮೀನನ್ನು ಬಲವಂತವಾಗಿ ಭೂ ಸ್ವಾಧೀನ ಮಾಡಿಕೊಂಡಿದ್ದು, 15 ವರ್ಷ ಕಳೆದರೂ ಕೈಗಾರಿಕೆ ಸ್ಥಾಪಿಸಿಲ್ಲ. ರೈತರ ಜಮೀನುಗಳನ್ನು ತುಂಡು ಭೂಮಿಗಳಾಗಿ ಪರಿವರ್ತಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದೆ’ ಎಂದು ಆರೋಪಿಸಿದರು.

ಬಳ್ಳಾರಿ ಜಿಲ್ಲಾಡಳಿತವು ಭೂ ಸ್ವಾಧೀನದ ಬೆಲೆ ನಿಗದಿಯಲ್ಲಿ ಆದ ಅನ್ಯಾಯ ಸರಿಪಡಿಸದೆ, ಕಡಿಮೆ ಬೆಲೆಗೆ ರೈತರ ಜಮೀನಿಗಳನ್ನು ಇತರೆ ಕಂಪನಿಗಳಿಗೆ ಮಾರಾಟ ಮಾಡಿ ವಂಚನೆ ಎಸಗಿದೆ. ಜಿಂದಾಲ್ ಸಂಸ್ಥೆಯು ಜನ ಅಭಿಪ್ರಾಯ ಧಿಕ್ಕರಿಸಿ ದೌರ್ಜನ್ಯದಿಂದ ಕೈಗಾರಿಕೆ ಸ್ಥಾಪನೆಗೆ ಮುಂದಾಗಿದ್ದು, ಈ ನೀತಿ ಖಂಡಿಸಿ ಪ್ರತಿಭಟಿನೆ ನಡೆಸಿದ ಹೋರಾಟಗಾರರನ್ನು ಬಂಧಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ಶಂಕಣ್ಣ, ಶಿವರೆಡ್ಡಿ, ಎ.ಸ್ವಾಮಿ, ಪಂಪನಗೌಡ ಕುರೇಕುಪ್ಪಶಾಖ, ಎಸ್. ಕಾಲೂಬ, ವಿ. ದೇವಣ್ಣ. ಸಿದ್ದಪ್ಪ, ಬಂಡಿ ಇಮಾಮ್ ಸಾಬ್, ಅಂಚೆ ಶಂಕರಪ್ಪ, ದೊಡ್ಡಬಸಪ್ಪ ಆರ್ ಎಸ್. ಮುರ್ಗೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-25-199180340

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.