ಸಂಡೂರು: ಪಟ್ಟಣ ಸೇರಿದಂತೆ ತಾಲ್ಲೂಕಿನ ವ್ಯಾಪ್ತಿಯ ಎಲ್ಲ ಗ್ರಾಮೀಣ ಪ್ರದೇಶದ ಜನರ ಸಂಚಾರದ ಅನುಕೂಲಕ್ಕಾಗಿ ಸಂಡೂರು ಪಟ್ಟಣದಲ್ಲಿ ನೂತನ ಎಲ್ಪಿಜಿ ಆಟೊ ಗ್ಯಾಸ್ ಬಂಕ್ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಪಟ್ಟಣದ ಕುಮಾರಸ್ವಾಮಿ ಆಟೊ ಚಾಲಕರ ಸಂಘದ ಮುಖಂಡರು ಗ್ರೇಡ್ -2 ತಹಶೀಲ್ದಾರ್ ಸುಧಾ ಅರಮನೆ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಸಂಘದ ಮುಖಂಡ ದುರುಗಪ್ಪ ಮಾತನಾಡಿ, ‘ಹಲವಾರು ವರ್ಷಗಳಿಂದ ಸಾರ್ವಜನಿಕ ಸೇವೆ, ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಎಲ್ಪಿಜಿ ಆಟೊ ಗ್ಯಾಸ್ ಬಂಕ್ ಕೊರತೆ ಇದ್ದು ಎಲ್ಲ ಎಲ್ಪಿಜಿ ಆಧಾರಿತ ಆಟೊ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ. ಚಾಲಕರ ಆರ್ಥಿಕ ಸ್ಥಿತಿಗತಿಯ ಸುಧಾರಣೆಗಾಗಿ ಸಂಡೂರು ಪಟ್ಟಣದಲ್ಲಿ ನೂತನ ಎಲ್ಪಿಜಿ ಆಟೊ ಗ್ಯಾಸ್ ಬಂಕ್ ಸ್ಥಾಪನೆ ಮಾಡಬೇಕು. ಚಾಲಕರು ತಮ್ಮ ಆಟೊಗಳಿಗೆ ಇಂಧನ ತುಂಬಿಸಲು ಹೊಸಪೇಟೆ ಸೇರಿದಂತೆ ದೂರದ ಪಟ್ಟಣಗಳಿಗೆ ತೆರಳುವುದರಿಂದ ಆರ್ಥಿಕ ಸಂಕಷ್ಟ ಉಂಟಾಗುತ್ತಿದ್ದು ಈ ಕೂಡಲೇ ತಾಲ್ಲೂಕು ಆಡಳಿತವು ತೈಲ ಕಂಪನಿಗಳ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಬಳಿ ಚರ್ಚಿಸಿ ನೂತನ ಎಲ್ಪಿಜಿ ಆಟೊ ಗ್ಯಾಸ್ ಬಂಕ್ ಸ್ಥಾಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಂಘದ ಮುಖಂಡರಾದ ತಿಮ್ಮಪ್ಪ , ಬಸಯ್ಯಸ್ವಾಮಿ , ನಾಗರಾಜ್ , ಅಶೋಕ, ಉಮೇಶ್ , ಪರಶುರಾಮ, ಗಣೇಶ್, ರಾಜಾ, ಯಾಸಿನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-25-1660107214

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.