ಸಂಡೂರು: ಕರ್ನಾಟಕ ಕೈಗಾರಿಕಾ ನೀತಿಯ ಅನುಸಾರ ಸ್ಥಳೀಯ ಗಣಿ ಅದಿರು ಸಾಗಣೆ ಗುತ್ತಿಗೆದಾರರಿಗೆ ಜಿಂದಾಲ್ ಸೇರಿದಂತೆ ಇತರೆ ಕೈಗಾರಿಕೆ ಗಳಿಗೆ ಲಾರಿಗಳ ಮೂಲಕ ಅದಿರು ಸಾಗಾಣಿಕೆಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ತಾಲ್ಲೂಕು ಅದಿರು ಸಾಗಣೆ ಗುತ್ತಿಗೆದಾರರ ಸಂಘದ ಮುಖಂಡರು ಬುಧವಾರ ಅದಿರು ಲಾರಿಗಳ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಿ ಪ್ರತಿಭಟನೆ ನಡೆಸಿ, ಗ್ರೇಡ್ – 2 ತಹಶೀಲ್ದಾರ್ ಸುಧಾ ಅರಮನೆ ಅವರಿಗೆ ಮನವಿ ಸಲ್ಲಿಸಿದರು.

ಸಂಡೂರು ತಾಲ್ಲೂಕಿನ ಅದಿರು ಸಾಗಣೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಯಣ್ಣ ಮಾತನಾಡಿ, ‘ಜಿಂದಾಲ್ ಸೇರಿದಂತೆ ಇತರೆ ಕೈಗಾರಿಕೆಗಳು ಸ್ಥಳೀಯ ಅದಿರು ಸಾಗಣೆ ಗುತ್ತಿಗೆದಾರರಿಗೆ ಅದಿರು ಸಾಗಣೆಗೆ ಅವಕಾಶ ಕಲ್ಪಿಸದಿರುವುದರಿಂದ ಎಲ್ಲ ಗುತ್ತಿಗೆದಾರರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದು, ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಜಿಂದಾಲ್ ಸಂಸ್ಥೆಯವರು ಗಣಿ ಬಾಧಿತ ಪ್ರದೇಶದ, ಸ್ಥಳೀಯ ಗುತ್ತಿಗೆದಾರರನ್ನು ನಿರ್ಲಕ್ಷ್ಯ ಮಾಡಿ ಹೊರಗಿನ, ಬಲಿಷ್ಠ ವ್ಯಕ್ತಿಗಳಿಗೆ ಅದಿರು ಸಾಗಣಿಕೆಗೆ ಅವಕಾಶ ನೀಡಿರುವುದನ್ನು ಖಂಡಿಸಲಾಗುವುದು. ಅದಿರು ಸಾಗಾಣಿಕೆ ದರದಲ್ಲಿ ಜಿಂದಾಲ್ ಕಂಪನಿಯು ನಿಗದಿ ಪಡಿಸಿರುವ ಪ್ರತಿ ಕಿ.ಲೋ.ಮೀಟರ್ ದರ ನಿಗದಿಪಡಿಸಿ ಎಂ.ಎಂ.ಆರ್.ಡಿ ನಿಯಮ ಪ್ರಕಾರ ನೀಡುವುದು. ಅದಿರು ಖರಿದಿಸುವ ಕಂಪನಿಗಳು ಗಣಿಭಾದಿತ ಪ್ರದೇಶಗಳಿಗೆ ಆರೋಗ್ಯ, ಶಿಕ್ಷಣ, ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ಸಂಡೂರಿನ ಗಣಿಗಳಿಂದ ಖರಿದಿಸಿದ ಅದಿರನ್ನು ಹೊರ ಜಿಲ್ಲೆ, ತಾಲ್ಲೂಕುಗಳಿಗೆ ಸಾಗಿಸಲು ಸಂಪೂರ್ಣವಾಗಿ ತಾಲ್ಲೂಕಿನ ಸ್ಥಳೀಯರಿಗೆ ಸಾಗಾಣಿಕೆ ಗುತ್ತಿಗೆಯನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಅದಿರು ನಿಗಮದ ಉಪಾಧ್ಯಕ್ಷ ಎಚ್.ಲಕ್ಷ್ಮಣ, ಸಂಘದ ಜಿಲ್ಲಾ ಅಧ್ಯಕ್ಷ ಅನಿಲ್ ನಿಕ್ಕಂ, ಮುಖಂಡರಾದ ಫಕೀರಪ್ಪ, ತಿಮ್ಮಪ್ಪ, ವಾಮದೇವ, ಈರಣ್ಣ, ರಾಘವೇಂದ್ರ, ಸುಬ್ಬಣ್ಣ, ಓಂಕಾರಗೌಡ, ನಾಗರಾಜ್, ಶಂಭುಲಿಂಗ, ಹನುಮೇಶ್, ಭೋಗೇಶ್ರೆಡ್ಡಿ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-25-136791055

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.