ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಸಂಗಂ ಕೊನೆಯ ದಿನದ ಗೋಷ್ಠಿಗಳು ಆರಂಭ

Last Updated 23 ಅಕ್ಟೋಬರ್ 2022, 5:19 IST
ಅಕ್ಷರ ಗಾತ್ರ

ಬಳ್ಳಾರಿ (ಡಾ. ಜೋಳದರಾಶಿ ದೊಡ್ಡನಗೌಡರ ವೇದಿಕೆ): ಸಂಗಂ ವಿಶ್ವಕವಿ ಸಮ್ಮೇಳನದ ಕೊನೆಯ ದಿನದ ಗೋಷ್ಠಿಗಳು ಭಾನುವಾರ ಬೆಳಿಗ್ಗೆ ನಗರದ ಬಿಐಟಿಎಂ ಕಾಲೇಜಿನಲ್ಲಿ ಆರಂಭಗೊಂಡವು.

15ನೇ ಗೋಷ್ಠಿಯು ಕೊಸ್ಟರಿಕದ ಜಿಂಗೋನಿಯ ಜಿಂಗೋನ್ ಅವರ ಕವನ ವಾಚನದೊಂದಿಗೆ ಆರಂಭಗೊಂಡಿತು. 'ಸಾಮ್ರಾಜ್ಯದ ಪತನ', 'ಭಾರತೀಯ ಬೀದಿ ನಾಯಿಗಳು' ಶೀರ್ಷಿಕೆಯ ಕಾವ್ಯ ವಾಚನ ಮಾಡಿದರು.

ಹೊರದೇಶ,‌ ಹೊರರಾಜ್ಯದ ಕವಿಗಳು ಸಾಕ್ಷಿಯಾದರು. ಕೊನೆಯ ದಿನ ಒಟ್ಟು ಏಳು ಗೋಷ್ಠಿಗಳು ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ಜರುಗಲಿದೆ.

ಕೊನೆಯ ದಿನ ವೆನಿಜುವೆಲಾ, ಬಾಂಗ್ಲಾದೇಶ, ಕೊಲಂಬಿಯಾ, ಕೆನಡಾ, ಕೇರಳ, ಗುಜರಾತ್, ಮಧ್ಯ ಪ್ರದೇಶ, ರಾಜಸ್ಥಾನ, ಮಣಿಪುರ ಹಾಗೂ ರಾಜ್ಯದ ವಿವಿಧ ಭಾಗಗಳ ಕವಿಗಳು ಕಾವ್ಯ ವಾಚನ ಮಾಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT