ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸನ್ಮಾರ್ಗ ಸಹಾಯ ಹಸ್ತ: ದಾಖಲೆ ನಿರ್ಮಾಣ

Published : 28 ಸೆಪ್ಟೆಂಬರ್ 2024, 16:09 IST
Last Updated : 28 ಸೆಪ್ಟೆಂಬರ್ 2024, 16:09 IST
ಫಾಲೋ ಮಾಡಿ
Comments

ಬಳ್ಳಾರಿ: ನಗರದ ದುರ್ಗಮ್ಮ ದೇಗುಲದ ಬಳಿ ಇರುವ ‘ಸನ್ಮಾರ್ಗ ಸಹಾಯ ಹಸ್ತ’ ಸಂಸ್ಥೆಯ ಸದುಪಯೋಗಿ ಮಳಿಗೆಗೆ ‘ರೌಂಡ್ ಟೇಬಲ್’ ಎಂಬ ಸಂಸ್ಥೆಯು ಶನಿವಾರ ಬಳಸಿದ ಬಟ್ಟೆ ನೀಡಿ ಬಡವರಿಗೆ ನೆರವಾಗಿದೆ.

ಉಳ್ಳವರ ಬಳಿ ಇರುವ ಹೆಚ್ಚುವರಿ ಬಟ್ಟೆ ಪಡೆದು ಇಲ್ಲದವರಿಗೆ ನೀಡುವ ಕೆಲಸವನ್ನು ‘ಸಹಾಯ ಹಸ್ತ’ ಸಂಸ್ಥೆಯು ಕಳೆದೊಂದು ದಶಕದಿಂದ ಮಾಡಿಕೊಂಡು ಬರುತ್ತಿದೆ. 

ಕಳೆದ ನಾಲ್ಕೈದು ವರ್ಷಗಳಿಂದ ಈ ಮಳಿಗೆಯಲ್ಲಿ ಐವತ್ತು ಸಾವಿರ ಬಡವರು ಬಟ್ಟೆ ಪಡೆದಿದ್ದಾರೆ ಎಂದು ಸಂಸ್ಥೆ ಹೇಳಿದೆ. 

ಈ ವೇಳೆ ಮಾತನಾಡಿದ ಸನ್ಮಾರ್ಗ ಬಳಗದ ಅಧ್ಯಕ್ಷರಾದ ಎಚ್.ಲಕ್ಷ್ಮಿಕಾಂತರೆಡ್ಡಿ, ‘ಸ್ಥಿತಿವಂತರು ತಮ್ಮ ಹಳೆ ಬಟ್ಟೆಗಳನ್ನು ಮನೆಯಲ್ಲಿ ಹಾಗೆಯೇ ಬಿಟ್ಟಿರುತ್ತಾರೆ. ಅದನ್ನು ನಮಗೆ ತಂದು ಕೊಟ್ಟರೆ ಅದನ್ನು ಶುಭ್ರಗೊಳಿಸಿ ಮತ್ತೊಬ್ಬ ಬಡವರಿಗೆ ನೀಡುತ್ತೇವೆ. ಈ ಕೆಲಸಕ್ಕೆ ಈವರೆಗೆ ಸಾವಿರಾರು ಜನರು ಸಹಾಯ ಸಹಕಾರ ನೀಡಿದ್ದಾರೆ. ವಿಶೇಷವಾಗಿ ಇಂದಿಗೆ ಈ ಮಳಿಗೆಯಿಂದ ಐವತ್ತು ಸಾವಿರ ಬಡವರು ಬಟ್ಟೆಗಳನ್ನು ಪಡೆದಿದ್ದಾರೆ. ಇದೊಂದು ಆತ್ಮತೃಪ್ತಿಯ ಕೆಲಸ. ನಮ್ಮ ಬಳಗವನ್ನು ಬೆಳೆಸುತ್ತಿರುವ ಮತ್ತು ಪ್ರೋತ್ಸಾಹ ನೀಡುತ್ತಿರುವ ಬಳ್ಳಾರಿಯ ನಾಗರಿಕರಿಗೆ ಹೃತ್ಪೂರ್ವಕ ಧನ್ಯವಾದಗಳು’ ಎಂದರು.

ಸನ್ಮಾರ್ಗದ ಉಪಾಧ್ಯಕ್ಷ ಹನುಮಂತರೆಡ್ಡಿ, ಎಂ.ಎಸ್.ಜಿ ಜಗದೀಶ, ಕಪ್ಪಗಲ್ಲು ಬಿ.ಚಂದ್ರಶೇಖರ ಆಚಾರ್, ಅಪ್ಪು ಸೇವಾ ಸಮಿತಿಯ ಮಂಜು, ಲಕ್ಷ್ಮಿರೆಡ್ಡಿ, ಚಂದ್ರಶೇಖರ, ರೌಂಡ್ ಟೇಬಲ್ ಸಂಸ್ಥೆಯ ಅಧ್ಯಕ್ಷ ಎನ್ ಶಿರೀಷ್ ಉಪಾಧ್ಯಕ್ಷ ಅಶೀಷ ಶೆಟ್ಟಿ, ರೋಹಿತ್ ರಾಜ್, ಶರತ್‌ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT