ಬಳ್ಳಾರಿ: ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ರಾಷ್ಟ್ರೀಯ ಪ್ರಶಸ್ತಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾ ಲಯದ ಸಹಾಯಕ ಪ್ರಾಧ್ಯಾಪಕ,ಸಾಹಿತಿ ಡಾ. ನಿಂಗಪ್ಪ ಮುದೇನೂರು, ನಿವೃತ್ತ ಅಧಿಕಾರಿ ಚೋರನೂರು ಟಿ. ಕೊಟ್ರಪ್ಪ, ಬುರ‍್ರಕಥಾ ಕಲಾವಿದರಾದ ಶಿವಮ್ಮ ಮತ್ತು ಬಲಗೊಲ್ಲ ಮಾರೆಪ್ಪ ಆಯ್ಕೆಯಾಗಿದ್ದಾರೆ.
‘ಬುರ‍್ರಕಥಾ ಈರಮ್ಮನವರ 10ನೇ ಪುಣ್ಯಸ್ಮರಣೆ ಪ್ರಯುಕ್ತ ನಗರದ ಕೊಟ್ಟೂರುಸ್ವಾಮಿ ಶಿಕ್ಷಣ ಮಹಾವಿದ್ಯಾಲ ಯದ ಸಭಾಂಗಣದಲ್ಲಿ ಆಗಸ್ಟ್ 24 ರಂದು ನಡೆಯುವ ವಿಚಾರಸಂಕಿರಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಡಾ. ಅಶ್ವರಾಮು ತಿಳಿಸಿದ್ದಾರೆ.
‘ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಹರೀಶ್ ರಾಮಸ್ವಾಮಿ ಪ್ರಶಸ್ತಿ ಪ್ರದಾನ ಮಾಡುವರು. ಜಾನಪದ ವಿದ್ವಾಂಸ ಪ್ರೊ.ಚಲುವರಾಜು ವಿಶೇಷ ಉಪನ್ಯಾಸ ನೀಡುವರು’ ಎಂದರು.