ಮಂಗಳವಾರ, ಜನವರಿ 31, 2023
18 °C

‘ಸಂಶೋಧನಾ ಕ್ಷೇತ್ರಕ್ಕೆ ಶಂಬಾ ಜೋಶಿ ಕೊಡುಗೆ ಅಪಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ‘ಸಂಶೋಧನಾ ಕ್ಷೇತ್ರಕ್ಕೆ ಶಂಬಾ ಜೋಶಿಯರವರ ಕೊಡುಗೆ ಅಪಾರ’ ಎಂದು ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಎಚ್‌. ಶಶಿಕಲಾ ತಿಳಿಸಿದರು.

ಶಂಬಾ ಜೋಶಿ ಅಧ್ಯಯನ ಪೀಠದಿಂದ ಅವರ ಜನ್ಮದಿನದ ಅಂಗವಾಗಿ ಬುಧವಾರ ವಿ.ವಿ.ಯಲ್ಲಿ ಹಮ್ಮಿಕೊಂಡಿದ್ದ ‘ಶಂಬಾ ಜೋಶಿಯವರ ಭಾಷಿಕ ಅಧ್ಯಯನದ ಸ್ವರೂಪ ಹಾಗೂ ಕನ್ನಡ ಸಂಶೋಧನೆಯ ಇತ್ತೀಚಿನ ಒಲವುಗಳು’ ಕುರಿತು ಮಾತನಾಡಿದರು.

ಜೋಶಿಯವರು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಅಧ್ಯಯನದ ವಿಧಾನಗಳನ್ನು ಅನುಸರಿಸುವ ಮೂಲಕ ತಮ್ಮದೆ ಆದ ನೆಲೆಕಟ್ಟಿಕೊಟ್ಟಿದ್ದರು. ಸಂಶೋಧನೆಯ ವಸ್ತುವಿನಿಂದಲೆ ಅದರ ನಿಯಮವನ್ನು ಕಂಡುಕೊಂಡಿದ್ದರು. ಭಾಷೆ ಜನರ ವ್ಯಕ್ತಿತ್ವ ತೋರಿಸುತ್ತದೆ. ಭಾಷೆಯ ಮೇಲಿನ ಅಭಿಮಾನ ಸಂಶೋಧನೆಯನ್ನು ವಿಸ್ತರಿಸುತ್ತಾ ಹೋಗುತ್ತದೆ ಎಂದು ಹೇಳಿದರು.

‘ಸಮುದಾಯದ ಚರಿತ್ರೆ ಮತ್ತು ಶಂಬಾ ಜೋಶಿ ಸಂಸ್ಕೃತಿ ಚಿಂತನೆ’ ಕುರಿತು ಮಾತನಾಡಿದ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಎನ್. ಚಿನ್ನಸ್ವಾಮಿ ಸೋಸಲೆ, ಶಂಬಾ ಅವರ ಮುಂದೆ ಅನೇಕ ಸವಾಲುಗಳಿದ್ದರೂ ಅವುಗಳನ್ನು ಅವರು ಅತ್ಯಂತ ಚಾಣಾಕ್ಷತನದಿಂದ ನಿರ್ವಹಿಸಿದ್ದರು. ಅವರ ಚಿಂತನೆಗಳು ವಸ್ತುನಿಷ್ಠವಾಗಿದ್ದವು ಎಂದರು.

ಕುಲಪತಿ ಪ್ರೊ. ಸ.ಚಿ. ರಮೇಶ, ಪ್ರತಿ ವರ್ಷ ಶಂಬಾ ಜೋಶಿಯವರ ಜನ್ಮ ದಿನಾಚರಣೆಯ ಪ್ರಯುಕ್ತ ಈ ರೀತಿಯ ಉಪನ್ಯಾಸ ಹಮ್ಮಿಕೊಳ್ಳುವ ಮೂಲಕ ಅವರ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ಉಣಬಡಿಸಲಾಗುತ್ತದೆ ಎಂದು ತಿಳಿಸಿದರು.
ಕುಲಸಚಿವ ಪ್ರೊ.ಎ ಸುಬ್ಬಣ್ಣ ರೈ, ಅಧ್ಯಯನ ಪೀಠದ ಸಂಚಾಲಕ ವಿರೂಪಾಕ್ಷಿ ಪೂಜಾರಹಳ್ಳಿ, ಶ್ವೇತಾ ಭಸ್ಮೆ, ಎಂ. ಸೌಮ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು