ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೀಠಾಧಿಪತಿ: ಶಿವಮೂರ್ತಿ ಸ್ವಾಮೀಜಿಗೆ ಬೆಂಬಲ

Published : 14 ಆಗಸ್ಟ್ 2024, 15:40 IST
Last Updated : 14 ಆಗಸ್ಟ್ 2024, 15:40 IST
ಫಾಲೋ ಮಾಡಿ
Comments

ಅರಸೀಕೆರೆ: ಹೋಬಳಿಯ ಅಣಜಿಗೆರೆ ಗ್ರಾಮದಲ್ಲಿ ಸಿರಿಗೆರೆ ತರಳಬಾಳು ಮಠದ ಪೀಠಧಿಪತಿಯಾಗಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯೇ ಮುಂದುವರಿಯುವಂತೆ ನೂರಾರು ಮಂದಿ ಮಠದ ಭಕ್ತರು ಬುಧವಾರ ಒತ್ತಾಯಿಸಿದರು.

ಗ್ರಾಮದ ಮುಖಂಡ ಅರುಣ್ ಕುಮಾರ್ ಮಾತನಾಡಿ, ‘ಸಮಾಜದ ಶೈಕ್ಷಣಿಕ ಸಾಮಾಜಿಕ ಅಭಿವೃದ್ಧಿಗೆ ಮಠದ ಸ್ವಾಮೀಜಿ ನಿರಂತರ ಶ್ರಮಿಸುತ್ತಿದ್ದಾರೆ. ಅಲ್ಲದೆ, ರಾಜ್ಯಾದ್ಯಂತ ಲಕ್ಷಾಂತರ ಜನರಿಗೆ ನೀರಾವರಿ ಸೌಲಭ್ಯ ಒದಗಿಸಲು ಕಾರಣರಾಗಿದ್ದಾರೆ. ಅವರ ಏಳಿಗೆಯನ್ನು ಸಹಿಸದ ಕೆಲವರು, ಸ್ವಾಮೀಜಿ ಹಾಗೂ ಮಠದ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪರವಾಗಿ ನಮ್ಮ ಗ್ರಾಮದ ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಿನ ತೀರ್ಮಾನ ಕೈಗೊಂಡಿದ್ದು ಮಠದ ಪೀಠಾಧಿಪತಿಯಾಗಿ ಮುಂದುವರಿಯಲು ಬೆಂಬಲ ಘೋಷಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡ ಯೋಗೇಶ್ವರ, ಉಮೇಶ್ ಪಾಟೀಲ್, ಕಿರಣ್ ಕುಮಾರ್, ರೇವಣಸಿದ್ಧಪ್ಪ, ಬಸವರಾಜ್, ಸದಾಶಿವಪ್ಪ, ಅಜ್ಜನ ಗೌಡ, ಸಚಿನ್, ಹರೀಶ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT