ಸಿರುಗುಪ್ಪ: ಜಿಲ್ಲೆಯಲ್ಲಿ ಅತಿ ದೊಡ್ಡ ನಗರಸಭೆ ಎನಿಸಿರುವ ಸಿರುಗುಪ್ಪ ನಗರಸಭೆ ಕಾರ್ಯಾಲಯದಲ್ಲಿ ಅರ್ಧಕ್ಕರ್ಧ ಸಿಬ್ಬಂದಿಯೇ ಇಲ್ಲ. ಇರುವ ಬೆರಳೆಣಿಕೆಯಷ್ಟು ಸಿಬ್ಬಂದಿಯಿಂದಲೇ ಎಲ್ಲವನ್ನು ನಿಭಾಯಿಸಬೇಕಾಗಿದ್ದು, ಅಗತ್ಯ ಕೆಲಸಗಳು ಸಮರ್ಪಕವಾಗಿ ನಡೆಯದಂತಾಗಿವೆ.

ಸ್ಥಳೀಯ ನಗರಸಭೆ ಕಚೇರಿಯಲ್ಲಿ ಯಾವ ಕೆಲಸವೂ ಸುಲಭವಾಗಿ ಆಗದು ಎಂಬ ಮಾತಿದೆ. ಏನೇ ಕೆಲಸ ಆಗಬೇಕಿದ್ದರೂ ನಿತ್ಯದ ಕಾಯಕ ಬಿಟ್ಟು ಅಲೆಯಬೇಕು ಎಂಬಂಥ ಪರಿಸ್ಥಿತಿ ಇದೆ.

ಸಿಬ್ಬಂದಿ ಸಮಸ್ಯೆಯ ನಡುವೆಯೇ ಜಿಡ್ಡುಗಟ್ಟಿರುವ ವ್ಯವಸ್ಥೆಯಲ್ಲಿ ಪೌರಾಯುಕ್ತ ಗಂಗಾಧರ ಅವರು ಸುಧಾರಣೆಗೆ ಮುಂದಾಗಿದ್ದಾರೆ. ಮ್ಯುಟೇಶನ್, ಫಾರಂ ನಂ.3ರಂತಹ ಕಡತ ವಿಲೇವಾರಿಯಲ್ಲಿ ಪ್ರಗತಿ ನೀರಸವಾಗಿರುವುದು ಕಂಡುಬಂದಿದೆ.

ಕಚೇರಿಯ 36 ವಿಭಾಗಗಳಲ್ಲಿ ಮಂಜೂರಾತಿ ಹುದ್ದೆಯಂತೆ 236 ಜನ ಕೆಲಸ ಮಾಡಬೇಕು. ಆದರೆ ಸದ್ಯ ಇರುವುದು 101 ಜನ ಮಾತ್ರ. ಗ್ರೂಫ್ ಎ- ಮುಂಜೂರಾದ ಹುದ್ದೆ-4, ಕಾರ್ಯನಿರ್ವಹಿಸುವ ಹುದ್ದೆ-1, ಖಾಲಿ ಹುದ್ದೆ-3, ಗ್ರೂಫ್ ಸಿ- ಮುಂಜೂರಾದ ಹುದ್ದೆ-67, ಕಾರ್ಯನಿರ್ವಹಿಸುವ ಹುದ್ದೆ-28, ಖಾಲಿ ಹುದ್ದೆ-39, ಗ್ರೂಫ್ ಡಿ- ಮುಂಜೂರಾದ ಹುದ್ದೆ-162, ಕಾರ್ಯನಿರ್ವಹಿಸುವ ಹುದ್ದೆ-69, ಖಾಲಿ ಹುದ್ದೆ-93, ಉಳಿದಂತೆ ಅರ್ಧಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಕಚೇರಿ ಕೆಲಸ ಡೋಲಾಯಮಾನ ಎನಿಸಿದೆ.

ಸಿಬ್ಬಂದಿಯ ಕೊರತೆಯಿಂದಾಗಿ ಕಸಗುಡಿಸುವುದು, ಚರಂಡಿ ಹೂಳು ತೆಗೆಯುವಂತಹ ಕಾರ್ಯ ಸರಾಗವಾಗಿ ನಡೆಯುತ್ತಿಲ್ಲ. ವಾರ್ಡ್ಗಳಲ್ಲಿ ಆಟೊಗಳ ಮೂಲಕ ಕಸವನ್ನು ಸಾಗಣೆ ಮಾಡಲಾಗುತ್ತಿದೆಯಾದರೂ, ಇನ್ನು ಕೆಲವು ಕಡೆ ಸಮಸ್ಯೆ ಇದೆ. ಎಲ್ಲೆಂದರಲ್ಲಿ ಪ್ಲ್ಯಾಸ್ಟಿಕ್ ಕಸ ಬಿದ್ದು ಸಮಸ್ಯೆಯಾಗುತ್ತಿದೆ.

ಅರ್ಧ ಕೋಟಿ ಖರ್ಚು ಮಾಡಿದ ಕಸಗುಡಿಸುವ ಯಂತ್ರದ ನಿರ್ವಹಣೆಗೆ ಸರಿಯಾದ ಸಿಬ್ಬಂದಿ ಇಲ್ಲ ಎಂಬ ಆರೋಪವೂ ಇದೆ. ನಗರಸಭೆಯಲ್ಲಿ ಒಂದೆರಡು ವಿಭಾಗ ಬಿಟ್ಟರೆ ಉಳಿದೆಲ್ಲವೂ ಸಂಕಷ್ಟದಲ್ಲಿಯೇ ಇವೆ. ನಿವೇಶನದ ಮ್ಯುಟೇಶನ್ ಸೇರಿ ನಾನಾ ಕೆಲಸದ ಸಂದರ್ಭದಲ್ಲಿ ಜನರಿಂದ ಹಣಕ್ಕೆ ಬೇಡಿಕೆ ಇಡುತ್ತಾರೆ ಎಂಬ ಆರೋಪ ಹೆಚ್ಚಿದೆ.

ಸೂಕ್ತ ಕ್ರಮಕೈಗೊಳ್ಳಿ

ನಗರಸಭೆಯಲ್ಲಿ ಯಾವ ಕೆಲಸವೂ ಸುಲಭವಾಗಿ ಆಗದು. ದಾಖಲೆಗಳು ಬೇಕಿದ್ದರೆ ಅರ್ಜಿ ಹಾಕಿದ ಬಳಿಕ ನಗರಸಭೆ ಸದಸ್ಯರು ಇಲ್ಲವೇ ಪ್ರಮುಖರಿಂದ ಸಿಬ್ಬಂದಿಗೆ ಹೇಳಿಸಬೇಕು. ಬಳಿಕವೇ ಕೆಲಸ ಶುರುವಾಗುತ್ತದೆ. ನಿಗದಿತ ಸಮಯಕ್ಕೆ ಜನರಿಗೆ ದಾಖಲೆ ದೊರೆಯುವುದಿಲ್ಲ. ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳಾದ ನಾಗಪ್ಪ, ಗಾದಿಲಿಂಗ, ಮಲ್ಲಿಕಾರ್ಜುನ, ಹುಲುಗಪ್ಪ ಹೇಳಿದರು.

ಖಾಲಿರುವ ಹುದ್ದೆಗಳ ಮಾಹಿತಿ ಸಹಿತ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಗರಸಭೆಯ ಅನುದಾನವನ್ನು ಬಳಸಿಕೊಂಡು ಹೊರಗುತ್ತಿಗೆ ಕಾರ್ಮಿಕರಿಂದ ಕೆಲಸವನ್ನು ಮಾಡಿಸಲಾಗುತ್ತಿದೆ
ಬಿ.ಎಂ.ನಾಗರಾಜ,ಶಾಸಕರು, ಸಿರುಗುಪ್ಪ

ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಕಡತ ವಿಲೇವಾರಿಗೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಇರುವ ಸಿಬ್ಬಂದಿಯೊಂದಿಗೆ ಕೆಲಸ ಕಾರ್ಯಗಳನ್ನು ಮಾಡಿಸಲಾಗುತ್ತಿದೆ ಗಂಗಾಧರ,
ನಗರಸಭೆ ಪೌರಾಯುಕ್ತ, ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.