ಸಿರುಗುಪ್ಪ: ‘2027ರ ಜನಗಣತಿ ಸಂಪೂರ್ಣ ಡಿಜಿಟಲ್ ಆಧಾರಿತ ಪ್ರಕ್ರಿಯೆಯಾಗಿದೆ. ಗಣತಿದಾರರಿಗೆ ಮೂರು ಹಂತದಲ್ಲಿ ತರಬೇತಿ ನೀಡಲಾಗುವುದು. ದೋಷ-ಮುಕ್ತ ಹಾಗೂ ಪಾರದರ್ಶಕ ಮಾಹಿತಿ ಸಂಗ್ರಹಣೆಗೆ ತರಬೇತಿ ಸಹಕಾರಿ’ ಎಂದು ತಹಶೀಲ್ದಾರ್ ಗೌಸಿಯ ಬೇಗಂ ಹೇಳಿದರು.

ನಗರದ ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ನಗರಸಭೆ, ಪಟ್ಟಣ ಪಂಚಾಯಿತಿ ವತಿಯಿಂದ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಭಾನುವಾರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಸಾರ್ವಜನಿಕರಿಗೆ ಆನ್ಲೈನ್ ಮೂಲಕ ಮಾಹಿತಿ ಸಲ್ಲಿಸಲು ‘ಸ್ವಯಂ-ಗಣತಿ’ ವ್ಯವಸ್ಥೆ ನೀಡಲಾಗುತ್ತಿದೆ.

ತಾಲ್ಲೂಕು ಆಡಳಿತದಿಂದ ಗ್ರಾಮೀಣ ಭಾಗದಲ್ಲಿ 469 ಗಣತಿದಾರರು, 68 ಮೇಲ್ವೀಚಾರಕರು, 10 ತರಬೇತಿದಾರರು. ಸಿರುಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ 90 ಗಣತಿದಾರರು, 15 ಮೇಲ್ವಿಚಾರಕರು, 2 ತರಬೇತಿದಾರರು, 16 ಕಾಯ್ದಿದಿರಿಸಿದ ಗಣತಿದಾರರು. ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 45 ಗಣತಿದಾರರು, 2 ತರಬೇತಿದಾರರನ್ನು ನೇಮಿಸಲಾಗಿದೆ’ ಎಂದರು.

ಜಿಲ್ಲಾ ಡಿಎಸ್ಒ ಅಧಿಕಾರಿ ಪತ್ರಿಬಸಪ್ಪ, ಜಿಲ್ಲಾ ಜನಗಣತಿ ನೋಡಲ್ ಅಧಿಕಾರಿ ಶ್ರೀನಾಥ್, ಬಿಇಒ ಎಚ್.ಗುರಪ್ಪ, ಬಿಸಿಎಂ ಸಹಾಯಕ ನಿರ್ದೇಶಕ ಕೆ.ಮಲ್ಲಿಕಾರ್ಜುನ, ಪೌರಾಯುಕ್ತ ಗಂಗಾಧರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪರಶುರಾಮ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಚಂದ್ರಕಾಂತ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-25-252425774

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.