ಸಿರುಗುಪ್ಪ: ಬಿರುಬಿಸಿಲಿಗೆ ಕಾದು ಕೆಂಡಂದಂತಾಗಿದ್ದ ಭೂಮಿಗೆ ಮಂಗಳವಾರ ಸಂಜೆ ಆಲಿಕಲ್ಲು ಸಹಿತ ಜೋರಾಗಿ ಸುರಿದ ಮಳೆಯಿಂದ ಇಳೆ ತಂಪಾಯಿತು.

ಹಲವು ದಿನಗಳಿಂದ ವಿಪರೀತ ಬಿಸಿಲಿನಿಂದಾಗಿ ಜನ ಬೇಸತ್ತು ಹೋಗಿದ್ದರು. ಮಂಗಳವಾರ ಬೆಳಿಗ್ಗೆ ಎಂದಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಬಿಸಿಲು ಇತ್ತು. ಸಂಜೆಯಾಗುತ್ತಿದ್ದಂತೆಯೇ, ಗಾಳಿ, ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿಯಿತು.

ಸಿರುಗುಪ್ಪ, ತಾಲ್ಲೂಕಿನ, ಅಗಸನೂರು, ಇಬ್ರಾಹಿಂಪುರ, ಬಾಗೇವಾಡಿ, ರಾರಾವಿ, ಬಗ್ಗೂರು, ಬಂಡ್ರಾಳ, ರಾವಿಹಾಳ್, ಭೈರಗಾಮಿದಿನ್ನಿ, ಅಗಸನೂರು, ಮಿಟ್ಟೆಸೂಗೂರು, ಗುಬ್ಬಿಹಾಳು ಶಾಲಿಗನೂರು, ಪೊಪ್ಪನಾಳನಲ್ಲಿ ಅಲಿಕಲ್ಲು ಮಳೆ ಬಂದಿದೆ.

ಮಳೆನೀರಿನಿಂದಾಗಿ ಚರಂಡಿಗಳು ತುಂಬಿ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ದಿನದ ಮಾರುಕಟ್ಟೆಯಲ್ಲಿ ಚರಂಡಿಯ ನೀರು ನಿಂತುಕೊಂಡು ದುರ್ವಾಸನೆ ಬೀರುತ್ತಿದೆ.

ತಾಲ್ಲೂಕಿನ ದೇಶನೂರು ಗ್ರಾಮದ ವಿನಾಯಕ ನಗರ ಕ್ಯಾಂಪ್ನಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡು ಉರಿಯಿತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.