ಸಿರುಗುಪ್ಪ: ‘ಗೈರು ಪಟ್ಟಾದಾರರ ಜಮೀನುಗಳನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳುವ ಆದೇಶವು ಸಂಘದ ಹೋರಾಟದ ಫಲವಾಗಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವಿ.ಎಸ್.ಶಿವಶಂಕರ ಅವರು ಹರ್ಷ ವ್ಯಕ್ತಪಡಿಸಿದರು.

‘ಸಂಘದ ಸಿರುಗುಪ್ಪ ತಾಲ್ಲೂಕು ಸಮಿತಿಯು ಗೈರು ಪಟ್ಟದಾರರ ಜಮೀನುಗಳನ್ನು ಸರ್ಕಾರ ವಶಪಡಿಸಿಕೊಂಡು ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕೆಂದು ಸುಮಾರು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದೆ. ಸುದೀರ್ಘ ಹೋರಾಟದ ಫಲವಾಗಿ ಇದೀಗ ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಝಬೇರ್ ಅವರು ಸಿರುಗುಪ್ಪ ತಾಲ್ಲೂಕಿನ 5 ಹಳ್ಳಿಗಳಲ್ಲಿ ನಕಲಿ ಭೂ ಮಾಲೀಕರ ರಿಜಿಸ್ಟರ್ ಪತ್ರಗಳನ್ನು ರದ್ದುಪಡಿಸಿ ಪಹಣಿ ಕಾಲಂ 9 ಮತ್ತು 12(2)ರಲ್ಲಿ ‘ಕರ್ನಾಟಕ ಸರ್ಕಾರ’ ಎಂದು ನಮೂದಿಸಲು ತಹಶೀಲ್ದಾರರಿಗೆ ಆದೇಶ ನೀಡಿದ್ದಾರೆ’ ಎಂದು ತಿಳಿಸಿದರು.

ಕಾರ್ಯಕರ್ತರು ಜಮೀನಿನಲ್ಲಿ ಸಂಭ್ರಮಾಚಾರಣೆ ನಡೆಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಮಾರುತಿ, ಸದಸ್ಯರಾದ ಎಚ್.ಗಾಳೆಪ್ಪ, ಎಂ.ದುರುಗಪ್ಪ, ಜಿ.ತಿರುಮಲ, ಯು.ಹನುಮೇಶ್, ಗಡಿಗಿ ವಿರೇಶ್, ಗಾಳೆಪ್ಪ, ಕಾಕೇರು ಬಸಪ್ಪ, ನಾಡಿಗರ ವಿರೇಶ್, ಕಾಕೇರು ಓಬಳೇಶ, ಜಿ.ರಾಮ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-25-1812570778

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.