ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games 4X400ಮೀ ರಿಲೇ: ಪುರುಷರ ತಂಡಕ್ಕೆ ಚಿನ್ನ, ಮಹಿಳೆಯರ ತಂಡಕ್ಕೆ ಬೆಳ್ಳಿ

Published 4 ಅಕ್ಟೋಬರ್ 2023, 13:14 IST
Last Updated 4 ಅಕ್ಟೋಬರ್ 2023, 13:14 IST
ಅಕ್ಷರ ಗಾತ್ರ

ಹಾಂಗ್‌ಝೌ: ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಸ್ಪರ್ಧಿಗಳ ಪದಕ ಬೇಟೆ ಮುಂದುವರಿದಿದೆ. ಅಥ್ಲೀಟ್ ವಿಭಾಗದಲ್ಲೂ ಭಾರತೀಯ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

4X400ಮೀ ರಿಲೇ ವಿಭಾಗದಲ್ಲಿ ಭಾರತದ ಪುರುಷರ ತಂಡ ಚಿನ್ನದ ಪದಕ ಜಯಿಸಿದೆ.

3 ನಿಮಿಷ 01.58 ಸೆಕೆಂಡುಗಳಲ್ಲಿ ಗುರಿ ತಲುಪಿದ ಮೊಹಮ್ಮದ್ ಅನಾಸ್ ಯಾಹ್ಯಾ, ಅಮೋಜ್ ಜೇಕಬ್, ರಾಜೇಶ್ ರಮೇಶ್ ಮತ್ತು ಮುಹಮ್ಮದ್ ಅಜ್ಮಲ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

4X400ಮೀ ರಿಲೇ ವಿಭಾಗದಲ್ಲಿ ಮಹಿಳೆಯರ ತಂಡವೂ ಬೆಳ್ಳಿ ಪದಕವನ್ನು ಜಯಿಸಿದೆ.

3 ನಿಮಿಷ 27.85 ಸೆಕೆಂಡುಗಳಲ್ಲಿ ಗುರಿ ತಲುಪಿದ ವಿತ್ಯಾ ರಾಮ್‌ರಾಜ್, ಐಶ್ಚರ್ಯ ಕೈಲಾಶ್ ಮಿಶ್ರಾ, ಪ್ರಾಚಿ ಮತ್ತು ಸುಭಾ ವೆಂಕಟೇಶನ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT