ಬಳ್ಳಾರಿ: ‘ರಾಜ್ಯದ ಎಲ್ಲ ಜಿಲ್ಲೆಗಳ (ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು) ಕಬ್ಬಿಣದ ಗಣಿಗಳ ಏಕೀಕೃತ ವಾರ್ಷಿಕ ಉತ್ಪಾದನಾ ಮಿತಿ ಸದ್ಯ 50 ದಶಲಕ್ಷ ಟನ್ (ಎಂಟಿ). ಇದೇ ವೇಗದಲ್ಲಿ ಅದಿರನ್ನು ಹೊರತೆಗೆದರೆ, ರಾಜ್ಯದ ಕಬ್ಬಿಣದ ಅದಿರಿನ ದಾಸ್ತಾನು ಮತ್ತು ಸಂಪನ್ಮೂಲ ಇನ್ನು 46 ವರ್ಷಗಳಲ್ಲಿ ಬರಿದಾಗಲಿದೆ’ ಎಂದು ಕೇಂದ್ರದ ಉನ್ನತಾಧಿಕಾರ ಸಮಿತಿ (ಸಿಇಸಿ) ಅಭಿಪ್ರಾಯಪಟ್ಟಿದೆ.

ರಾಜ್ಯದ ಗಣಿಗಳ ‘ಒಪ್ಪಿತ ವಾರ್ಷಿಕ ಗರಿಷ್ಠ ಉತ್ಪಾದನೆಯನ್ನು (ಎಂಪಿಎಪಿ)’ 57 ಎಂಟಿಗೆ ಏರಿಸುವಂತೆ ಸುಪ್ರೀಂ ಕೋರ್ಟ್ಗೆ ಶಿಫಾರಸು ಮಾಡಿರುವ ಸಿಇಸಿ, ತನ್ನ ವರದಿಯಲ್ಲಿ ರಾಜ್ಯದಲ್ಲಿರುವ ಒಟ್ಟು ಕಬ್ಬಿಣದ ಅದಿರಿನ ದಾಸ್ತಾನು ಮತ್ತು ಅದರ ಬಳಕೆಯ ಕುರಿತೂ ವಿವರಣೆ ನೀಡಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಂದಾಜಿನ ಪ್ರಕಾರ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಸೇರಿ ಒಟ್ಟು 1,992 ಎಂಟಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಚಿತ್ರದುರ್ಗದಲ್ಲಿ 296.17 ಎಂಟಿ ಇದೆ. ತುಮಕೂರಿನಲ್ಲಿ 177.37 ಎಂಟಿ ಅದಿರು ದಾಸ್ತಾನು ಇದೆ. ಇದೆಲ್ಲವನ್ನೂ ಒಟ್ಟುಗೂಡಿಸಿದರೆ ರಾಜ್ಯದ ಒಟ್ಟಾರೆ ದಾಸ್ತಾನು ಮತ್ತು ಸಂಪನ್ಮೂಲ 2,465 ಎಂಟಿ ಆಗುತ್ತದೆ ಎಂದು ಸಿಇಸಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

‘2020ರಿಂದ ಈಚೆಗೆ ರಾಜ್ಯದಲ್ಲಿ 150 ಎಂಟಿ ಅದಿರನ್ನು ಹೊರಗೆ ತೆಗೆಯಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಉಳಿಯುವುದು ಇನ್ನು 2,315 ಎಂಟಿ ಅದಿರು ಮಾತ್ರ. ಇದನ್ನು ವಾರ್ಷಿಕ 50 ಎಂಟಿಯಂತೆ ಹೊರಗೆ ತೆಗೆದರೂ ಇಡೀ ಅದಿರು 46 ವರ್ಷಗಳಲ್ಲಿ ಖಾಲಿಯಾಗಲಿದೆ. 55 ಎಂಟಿಯಂತೆ ತೆಗೆದರೆ 42 ವರ್ಷಗಳಲ್ಲಿ, 57 ಎಂಟಿ ಮಿತಿಯಲ್ಲಿ ಹೊರ ತೆಗೆದರೆ 40 ವರ್ಷಗಳಲ್ಲಿ ಸಂಪೂರ್ಣ ಬರಿದಾಗಲಿದೆ. ಹೀಗಾಗಿ ಅದಿರನ್ನು ಮುಂದಿನ ಪೀಳಿಗೆಗೆ ಉಳಿಸಬೇಕಿದ್ದರೆ ಅತ್ಯಂತ ಪ್ರಜ್ಞಾಪೂರ್ವಕವಾಗಿ, ಎಚ್ಚರಿಕೆಯಿಂದ ಹೊರತೆಗೆಯಬೇಕು’ ಎಂದು ಸ್ಪಷ್ಟವಾಗಿ ಸಿಇಸಿ ಬರೆದಿದೆ.

‘2014ಕ್ಕೂ ಹಿಂದೆ ಇದ್ದ ಕಾನೂನುಗಳ ಪ್ರಕಾರ ಗಣಿಗಳ ಗುತ್ತಿಗೆ ಅವಧಿಯನ್ನು 20 ವರ್ಷಕ್ಕೆ ನೀಡಲಾಗುತ್ತಿತ್ತು. ಎಂಪಿಎಪಿಯನ್ನು ಅದರ ಆಧಾರದಲ್ಲೇ ನಿಗದಿ ಮಾಡಲಾಗುತ್ತಿತ್ತು. 2015ರ ಬಳಿಕದ ಕಾನೂನಿನ ಪ್ರಕಾರ ಗಣಿ ಗುತ್ತಿಗೆ ಅವಧಿಯನ್ನು 50 ವರ್ಷಗಳಿಗೆ ನೀಡಲಾಗುತ್ತಿದೆ. ಹೀಗಾಗಿ ಎಂಪಿಎಪಿ ಹೆಚ್ಚಳ ಮಾಡುವಾಗ ಉತ್ಪಾದನೆಯನ್ನು 50 ವರ್ಷಗಳಿಗೆ ಭಾಗಿಸಬೇಕು’ ಎಂದು ಸಿಇಸಿ ಸುಪ್ರೀಂ ಕೋರ್ಟ್ಗೆ ಅರಿಕೆ ಮಾಡಿಕೊಂಡಿದೆ.

ಸಾಬೀತಾದ ದಾಸ್ತಾನು 1,023 ಎಂ.ಟಿ:

ಮೇಲುಸ್ತುವಾರಿ ಪ್ರಾಧಿಕಾರವು ಖಚಿತವಾಗಿರುವ ದಾಸ್ತಾನನ್ನೂ ಮಾತ್ರ ಲೆಕ್ಕಕ್ಕೆ ಪರಿಗಣಿಸಿದೆ. ರಾಜ್ಯದಲ್ಲಿ ಒಟ್ಟಾರೆ 2,465 ಎಂಟಿಯಷ್ಟು ಕಬ್ಬಿಣದ ಅದಿರಿನ ದಾಸ್ತಾನು ಮತ್ತು ಸಂಪನ್ಮೂಲ ಇದ್ದರೂ, ಇದರಲ್ಲಿ ಖಚಿತವಾಗಿರುವ ದಾಸ್ತಾನು 1,023 ಮಾತ್ರ ಎಂದು ಅದು ಪ್ರತಿಪಾದಿಸಿದೆ. ಖಚಿತ ದಾಸ್ತಾನನ್ನು ಮಾತ್ರವೇ ತೆಗೆಯುವುದು ಸೂಕ್ತ. ಇಡೀ ಸಂಪನ್ಮೂಲ ತೆಗೆಯಲು ಪ್ರಯತ್ನಿಸುವುದು ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದ್ದರಿಂದ 1,023 ಎಂಟಿಯನ್ನು 50 ವರ್ಷಗಳಿಗೆ ಭಾಗಿಸಿ ಎಂಪಿಎಪಿಯನ್ನು 20.46 ಎಂಟಿಗೆ ನಿಗದಿ ಮಾಡಬೇಕು ಎಂದು ಅದು ಪ್ರತಿಪಾದಿಸಿದೆ.

9 ಗಣಿಗಳ ಪ್ರಾಬಲ್ಯ

ರಾಜ್ಯದಲ್ಲಿ ಒಟ್ಟು 45 ಕಬ್ಬಿಣದ ಅದಿರು ಗಣಿಗಳಿವೆ. ಈ ಎಲ್ಲ ಗಣಿಗಳಿಂದ 2023–24ನೇ ಸಾಲಿನಲ್ಲಿ ಒಟ್ಟು 40.3 ಎಂಟಿ ಅದಿರು ಉತ್ಪಾದನೆಯಾಗಿದೆ. ಇದರಲ್ಲಿ 9 ಗಣಿಗಳು ಶೇ 87ರಷ್ಟು ಅದಿರುವ ಉತ್ಪಾದಿಸುವ ಮೂಲಕ ಪ್ರಾಬಲ್ಯ ಸಾಧಿಸಿವೆ. ಇನ್ನುಳಿದ 36 ಗಣಿಗಳ ಉತ್ಪಾದನಾ ಪ್ರಮಾಣ ಶೇ 13ರಷ್ಟು ಮಾತ್ರ. ಗಣಿ;ಉತ್ಪಾದನೆ(ದಶಲಕ್ಷ ಟನ್) ಎನ್ಎಂಡಿಸಿ;12.6 ಜೆಎಸ್ಡಬ್ಲ್ಯು;6.5 ವೇದಾಂತ;6.0 ಕುಮಾರಸ್ವಾಮಿ;2.6 ಸ್ಮಯೋರ್;1.8 ಬಿಕೆಜಿ;1.7 ಪ್ರವೀಣ್ ಚಂದ್ರ;1.4 ರಾಜ್ಯ ಗಣಿ ನಿಗಮ;1.3 ವೀರಭದ್ರಪ್ಪ ಸಂಗಪ್ಪ;1.1 ಒಟ್ಟು;35.0 ಇತರ 36 ಗಣಿಗಳು;5.3 ಒಟ್ಟು;40.3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.