ಬಳ್ಳಾರಿ: ನಗರದ ಖಾಸಗಿ ಪಾಲಿಟೆಕ್ನಿಕ್ ಕಾಲೇಜಿನ ಡಿಪ್ಲೊಮಾ ವಿದ್ಯಾರ್ಥಿಯೊಬ್ಬ ಮಂಗಳವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈ ಸಂಬಂಧ ಪ್ರಾಧ್ಯಾಪಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಡಿಪ್ಲೋಮಾ ಮೆಕ್ಯಾನಿಕ್ ವಿಭಾಗದ ನಾಲ್ಕನೇ ಸೆಮಿಸ್ಟಾರ್ನ ವಿದ್ಯಾರ್ಥಿ, ಗುಗ್ಗರಹಟ್ಟಿಯ ವಾಸಿ ಅರವಿಂದ ಮೃತ. ಪೋಷಕರು ನೀಡಿದ ದೂರು ಆಧರಿಸಿ ನಗರದ ಎಪಿಎಂಸಿ ಠಾಣೆಯಲ್ಲಿ ಕಾಲೇಜಿನ ಮೆಕ್ಯಾನಿಕ್ ವಿಭಾಗದ ಮುಖ್ಯಸ್ಥ ಅಂಬರೀಶ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‘ಅರವಿಂದನ ನಡವಳಿಕೆ ಬಗ್ಗೆ ಅಂಬರೀಶ ಅವರು ಆಕ್ಷೇಪಿಸಿದ್ದರು ಎನ್ನಲಾಗಿದೆ. ಪೋಷಕರನ್ನು ಕರೆದು ಅವರ ಎದುರೇ ಬುದ್ಧಿ ಹೇಳಿದ್ದರು ಎಂದು ಗೊತ್ತಾಗಿದೆ. ಮಾ. 10ರಂದು ಕಾಲೇಜಿನಲ್ಲಿ ಗಲಾಟೆಯಾಗಿದ್ದು, ಆಗಲೂ ಪೋಷಕರನ್ನು ಕರೆದು ಅಂಬರೀಶ ಅವರು ಅರವಿಂದನ ಬಗ್ಗೆ ದೂರು ಹೇಳಿದ್ದರು. ಕಾಲೇಜಿನಿಂದ ಹೊರಹಾಕುವುದಾಗಿ ಹೇಳಿದ್ದರು’ ಎಂದು ಎಫ್ಐಆರ್ನಲ್ಲಿ ನಮೂದಿಸಲಾಗಿದೆ.

‘ಅಂಬರೀಶ ಅವರ ಕಿರುಕುಳದಿಂದಲೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ, ಪ್ರಾಧ್ಯಾಪಕರು ಈ ಆರೋಪ ನಿರಾಕರಿಸಿದ್ದಾರೆ.

ಅರವಿಂದನ ಆತ್ಮಹತ್ಯೆ ವಿಚಾರ ತಿಳಿಯುತ್ತಲೇ ಕಾಲೇಜು ಬಳಿ ಸಹಪಾಠಿಗಳು ಪ್ರತಿಭಟನೆ ನಡೆಸ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.