ತೆಕ್ಕಲಕೋಟೆ: ಸಮೀಪದ ಹೆರಕಲ್ ಗ್ರಾಮದ ಬಳಗಾನೂರು ಮರಿ ಶಿವಯೋಗಿಗಳ ಮಠದಲ್ಲಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಮರಿ ಶಿವಯೋಗಿಗಳ 46ನೇ ವರ್ಷದ ಪುಣ್ಯರಾಧನೆ ಹಾಗೂ ಶಿವಶರಣ ಮರಿತಾತನವರ 38ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ 12 ದಿನ ನಡೆದ ಕಲಬುರ್ಗಿ ಶರಣಬಸಪ್ಪರ ಪುರಾಣ ಪ್ರವಚನಕ್ಕೆ ಮಂಗಲ ಹಾಡಲಾಯಿತು.

ನಂತರ ಮರಿಶಿವಯೋಗಿಗಳು ಹಾಗೂ ಮರಿತಾತನ ಶಿಲಾಮೂರ್ತಿಗಳಿಗೆ ರುದ್ರಾಭಿಷೇಕ ಹಾಗೂ ಹಾಲಾಪುರ ಮಠದ ಚಿದಾನಂದಯ್ಯ ತಾತಾನವರ ಕರ್ತೃಗದ್ದುಗೆಗೆ ಸಹಸ್ರ ಬಿಲ್ವಾರ್ಚನೆಯೊಂದಿಗೆ ಮಹಾರುದ್ರಾಭಿಷೇಕ ಜರುಗಿತು

ಶಿವಮೂರ್ತಿಗಳಿಗೆ ಸರ್ವಾಲಂಕಾರ, ಮಹಾಪೂಜೆ, ರಥೋತ್ಸವ ಪೂಜೆ ಹಾಗೂ ಭೂರಿಗಣಾರಾಧನೆ ನೆರವೇರಿಸಲಾಯಿತು.

ಸಂಜೆ ಹೆರಕಲ್ಲು ಗ್ರಾಮದ ಎಚ್.ಆರ್. ಗಾದಿಲಿಂಗನಗೌಡರ ಮನೆಯಿಂದ ಬಳಗಾನೂರು ಮರಿಶಿವಯೋಗಿಗಳ ಪಲ್ಲಕ್ಕಿಯನ್ನು ಸಕಲ ವಾದ್ಯ ವೈಭವ, ಕಳಸ– ಕನ್ನಡಿ ಮೆರವಣಿಗೆಯೊಂದಿಗೆ ಶ್ರೀಮಠಕ್ಕೆ ತಂದು ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಾಜ ಬೀದಿಯಲ್ಲಿ ಮರಿಶಿವಯೋಗಿಗಳ ರಥೋತ್ಸವ ಸಂಭ್ರಮದಿಂದ ನಡೆಯಿತು. ಬಾಳೆಹಣ್ಣು, ಹೂ–ಹಣ್ಣು ಸಮರ್ಪಿಸಿ ಭಕ್ತರು ಭಕ್ತಿಭಾವ ಮೆರೆದರು.

ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ಸಿರಗುಪ್ಪ, ದಡೇಸೂಗೂರು, ಕೆಂಚನಗುಡ್ಡ, ಹಳೇಕೋಟೆ, ನಿಟ್ಟೂರು, ಸಿಂಗಾಪುರ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-25-187499882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.