ತೆಕ್ಕಲಕೋಟೆ: ಸಮೀಪದ ಉಪ್ಪಾರ ಹೊಸಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದಂದು ಆಂಜನೇಯ ಸ್ವಾಮಿ ದೇವಸ್ಥಾನದ ರಥೋತ್ಸವದ ಮರುದಿನ ಶನಿವಾರ ಗ್ರಾಮದಲ್ಲಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸುವುದು ಇಲ್ಲಿನ ವಾಡಿಕೆ. ಆದರೆ ಇಲ್ಲಿನ ವಿಶಿಷ್ಟ ಹೋಳಿ ಆಚರಣೆ ಸುತ್ತಲಿನ ಗ್ರಾಮಸ್ಥರನ್ನು ಆಕರ್ಷಿಸುತ್ತದೆ.

ಸುತ್ತಲೂ ನೆರೆದ ಜನ ಹೊಂಡಕ್ಕೆ ಜಿಗಿದು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುವುದು ನೂರಾರು ವರ್ಷಗಳಿಂದ ಬಂದ ಆಚರಣೆ, ಊರ ಗೌಡರು ಹಾಗೂ ಶಾನುಭೋಗರ ಮನೆಯಿಂದ ಕಳಸ ಹಾಗೂ ಬಣ್ಣಗಳನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ಪೂಜೆ ಮಾಡಿ ನಂತರ ಈಶ್ವರ ದೇವಸ್ಥಾನ ಹಾಗೂ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿರುವ ಪುಷ್ಕರಣಿಗೆ ರಂಗುರಂಗಿನ ಬಣ್ಣ ಹಾಕಿ ಹೋಳಿ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.

ಹೊಂಡಕ್ಕೆ ಧುಮುಕುವ ಯುವಕರು ಬಿಂದಿಗೆಗಳಲ್ಲಿ ಬಣ್ಣದ ನೀರು ತುಂಬಿಕೊಂಡು ಮನೆಗೆ ಒಯ್ಯುತ್ತಾರೆ. ಮನೆಯಲ್ಲಿರುವ ಹೆಂಗಸರು, ಮಕ್ಕಳು ವಯಸ್ಸಾದವರು ಬಣ್ಣವನ್ನು ಮೈಮೇಲೆ ಪ್ರೊಕ್ಷಿಸಿಕೊಂಡು ನಂತರ ಸ್ನಾನ ಮಾಡಿ ಗ್ರಾಮಕ್ಕೆ ಗ್ರಾಮವೇ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ ಎನ್ನುತ್ತಾರೆ ಗ್ರಾಮಸ್ಥರು.

ಕಳೆದ ವರ್ಷ ಹೊಂಡದಲ್ಲಿ ಬಿದ್ದು ಬಾಲಕ ತಿಂಗಳುಗಳ ಕಾಲ ಕೋಮಾಕ್ಕೆ ಜಾರಿದ್ದ ಹಿನ್ನೆಲೆಯಲ್ಲಿ ಈ ಬಾರಿ ಸಾಲು ಸಾಲಾಗಿ ಬಂದು ಪುಷ್ಕರಣಿಯ ಬಣ್ಣದಲ್ಲಿ ಮಿಂದೇಳುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಪಿಎಸ್ಐ ಸದ್ದಾಂ ಹುಸೇನ್ ತಿಳಿಸಿದರು.

ಇಬ್ಬರು ಪಿಎಸ್ಐ, 20 ಜನ ಪೊಲೀಸರು ಹಾಗೂ 30 ಗೃಹರಕ್ಷಕ ದಳದ ಸಿಬ್ಬಂದಿ ವ್ಯವಸ್ಥೆ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಈ ಕುರಿತು ಶಾನುಭೋಗ ಕರಣಂ ಗುರುರಾಜ ಸ್ವಾಮಿ ಮಾತನಾಡಿ, ಬಹು ಹಿಂದಿನಿಂದಲೂ ಈ ವಿಶಿಷ್ಟ ಪದ್ದತಿ ಜಾರಿಯಲ್ಲಿದ್ದು, ಮುಂಚೆ ಪುಷ್ಕರಣಿಗೆ ಗುಲಾಬಿ ಹಾಗೂ ಬೇರೆ ಬೇರೇ ಹೂಗಳನ್ನು ಹಾಕಿ ಬಣ್ಣ ತಯಾರಿಸಿ ಆಡಲಾಗುತ್ತಿತ್ತು. ಆದರೆ ಈಗ ಕೃತಕ ಬಣ್ಣಗಳನ್ನು ಅನಿವಾರ್ಯವಾಗಿ ಬಳಸುತ್ತಿದ್ದೇವೆ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-25-711580662

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.