ತೆಕ್ಕಲಕೋಟೆ: ಪಟ್ಟಣದ ಶ್ರೀ ವರವಿನ ಮಲ್ಲೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ಮೇ 1 ರಂದು ನಡೆಯಲಿದ್ದು ಗುರುವಾರ ಪೂರ್ವಭಾವಿ ಸಿದ್ದತಾ ಸಭೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಸವಿತಾ ಎಚ್. ನೇತೃತ್ವದಲ್ಲಿ ನಡೆಯಿತು.

ಜಾತ್ರೆಯಲ್ಲಿ ಸಾರ್ವಜನಿಕರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ನೈರ್ಮಲೀಕರಣ, ಸ್ವಚ್ಛತೆ, ವಿದ್ಯುತ್ ದೀಪಗಳ ವ್ಯವಸ್ಥೆ, ಬಂದೋಬಸ್ತ್, ಕುಡಿಯುವ ನೀರು, ಸಾರಿಗೆ ವ್ಯವಸ್ಥೆ, ದೇವರ ದರ್ಶನ, ಧಾರ್ಮಿಕ ಕಾರ್ಯಗಳು ಇತ್ಯಾದಿಗಳ ಕುರಿತು ವಿವಿಧ ಇಲಾಖೆಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು.

ರಾರಾವಿ, ಧಡೇಸೂಗೂರು, ಹೊಳಗುಂದಿ, ಸಿರುಗುಪ್ಪ ಹಾಗೂ ತೆಕ್ಕಲಕೋಟೆ ಮೇಟಿಗಳು ದೇವಸ್ಥಾನದ ಕರ್ತರು ಅಧಿಕಾರಿಗಳಿಗೆ ವಿವಿಧ ಬೇಡಿಕೆ ಸಲ್ಲಿಸಿದರು.

ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಟಿ ಸೆಲ್ವಮಣಿ, ಉಪತಹಶೀಲ್ದಾರ್ ಯಾಕುಬ್ ಅಲಿ, ಮುಖ್ಯಾಧಿಕಾರಿ ಪರಶುರಾಮ, ಕೆಪಿಟಿಸಿಎಲ್ ಇಲಾಖೆಯ ಜೆಇ ಅವಿನಾಶ್, ಗ್ರಾಮ ಆಡಳಿತ ಅಧಿಕಾರಿ ಶಿವರಾಜ, ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ಜೆ ಶಿವರುದ್ರಪ್ಪ, ಪೊಲೀಸ್ ಇಲಾಖೆ, ಆರೋಗ್ಯ, ಕೆಕೆಆರ್ಟಿಸಿ ಅಧಿಕಾರಿಗಳು ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-25-337595916

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.