ತೆಕ್ಕಲಕೋಟೆ: ಪ್ರಾಗೈತಿಹಾಸಿಕ ಕಾಲದ ಉತ್ಪನನ ನಡೆದ ‘ಗೌಡ್ರ ಮೂಲೆ’ ಸ್ಥಳದಲ್ಲಿ ಬಂಡೆಗಲ್ಲು ಶಾಸನ ಪತ್ತೆಯಾಗಿದ್ದು, ಇತಿಹಾಸ ಸಂಶೋಧನಾರ್ಥಿಗಳಾದ ಮನೋಹರ್ ಸಿ.ಎಂ ಅವರು ಇದನ್ನು ಗುರುತಿಸಿದ್ದಾರೆ.

ಅಧ್ಯಯನ ನಡೆಸಿದ ಧಾರವಾಡದ ಲಿಪಿತಜ್ಞ ಮಾರುತಿ ಭಜಂತ್ರಿ, ‘ಶಾಸನವು ವಿಜಯನಗರ ಅಥವಾ ವಿಜಯನಗರೋತ್ತರ (17 ರಿಂದ 18ನೇ ಶತಮಾನ) ಕಾಲಘಟ್ಟದಲ್ಲಿ ಬರೆಸಿರಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಾಸನದ ಒಕ್ಕಣೆ: ಬಂಡೆಗಲ್ಲು ಶಾಸನವು ಆರು ಸಾಲು ಹೊಂದಿದೆ. ಕನ್ನಡ ಲಿಪಿ ಬಳಸಲಾಗಿದೆ. ಆರಂಭದಲ್ಲಿ ಸೂರ್ಯ ಮತ್ತು ಚಂದ್ರನ ಸಂಕೇತ ಇದ್ದು, ‘ಟೆಕಲಕೊಟೆ ನಾಡಗೌಡ ಯರೆ ತ್ರಿಜಣ ಗೌಡನ ಮಗ ಮಲಣಗೌಡನ ಮಗ ಚಿಣಗೌಡನ ಮಗ ಪ್ರಜಟನ ಮಗ ಗೌಡಪನ ಮಗ ತ್ರಿಚಣ ಚನ್ನವಿರಪ ಗೌಡನು ಕಟಿಸಿದ ಕೆರೆ’ ಎಂದು ಬರೆಯಲಾಗಿದೆ.

ಶಾಸನದಲ್ಲಿ ತೆಕ್ಕಲಕೋಟೆಯ ಸ್ಥಳನಾಮವನ್ನು ‘ಟೆಕಲಕೊಟೆ’ ಎಂದು ನಮೂದಿಸಿದ್ದು ವ್ಯಕ್ತಿಯೊಬ್ಬ (ತ್ರಿಚಣ ಚನ್ನವಿರಪ ಗೌಡ) ತಾನು ಕೆರೆಯನ್ನು ನಿರ್ಮಿಸಿದ ಸಂದರ್ಭದಲ್ಲಿ ತನ್ನ ವಂಶದ ಮತ್ತು ತನ್ನ ಪ್ರತಿಷ್ಠೆಯನ್ನು ತೋರ್ಪಡಿಸಲು ಹಾಗೂ ವಿಜಯನಗರ ಕಾಲದಲ್ಲಿ ನಾಡಗೌಡರಾಗಿದ್ದ ತನ್ನ ವಂಶದ ಹಿರಿಯಜ್ಜನ ಹೆಸರನ್ನು ಗುರುತಿಸುವ ಕಾರ್ಯವನ್ನು ಮಾಡಿದ್ದಾನೆ.

ಶಾಸನದ ಪ್ರಕಾರ ತೆಕ್ಕಲಕೋಟೆ ಕುರುಗೋಡಿನ ಸಿಂಧರ ಕಾಲದಲ್ಲಿ ತೆಕ್ಕೆಕಲ್ಲು 12 ಎಂಬ ನಾಮ ವಿಶೇಷತೆ ಪಡೆದು ವಿಜಯನಗರ ಕಾಲದಲ್ಲಿಯೂ ಕೂಡ ಒಂದು ನಾಡು ಆಗಿ ಪ್ರಸಿದ್ಧತೆಯನ್ನು ಹೊಂದಿತ್ತು ಎಂದು ತಿಳಿದುಬರುತ್ತದೆ.

ಬೃಹತ್ ಬಂಡೆಯೊಂದರ ಮೇಲೆ ಶಾಸನವನ್ನು ಬರೆಯಲಾಗಿದ್ದು, ಶಾಸನದ ಮುಂದೆಯೇ ಕೆರೆಯ ಕುರುಹುಗಳು ಕಂಡು ಬಂದಿವೆ. ಪ್ರಸ್ತುತ ‘ಗುನ್ನಯ್ಯನ ಕೆರೆ’ ಎಂದು ಕರೆಯಲಾಗುತ್ತಿದೆ. ವ್ಯವಸಾಯ, ಸಾರ್ವಜನಿಕರಿಗೆ ಹಾಗೂ ಪ್ರಾಣಿ, ಪಕ್ಷಿಗಳಿಗೆ ನೀರುಣಿಸಲು ಕೆರೆಯನ್ನು ನಿರ್ಮಾಣ ಮಾಡಿದ ಮಹತ್ತರ ಕಾರ್ಯ ಸ್ಮರಿಸುವ ದಾಖಲೆಯಾಗಿದೆ.

ಶಾಸನ ಪತ್ತೆ ಕಾರ್ಯದಲ್ಲಿ ಅಶೋಕ್ ಅಬಕಾರಿ ಹಾಗೂ ಎಂ.ನಾಗರಾಜ ಸಹಕರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-25-115983508

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.