ತೆಕ್ಕಲಕೋಟೆ: ‘ಪಟ್ಟಣದಲ್ಲಿ ಏ.20ರಂದು ನಡೆಯಲಿರುವ ಬಸವೇಶ್ವರ ಜಯಂತಿ ಆಚರಣೆಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಸಂಪೂರ್ಣ ಸಹಕಾರ ನೀಡುವ ಜತೆಗೆ ಪ್ರೋತ್ಸಾಹ ಧನ ನೀಡಬೇಕು’ ಎಂದು ಆಗ್ರಹಿಸಿ ವೀರಶೈವ ಲಿಂಗಾಯತ ಮುಖಂಡರು ಪ್ರಭಾರ ಮುಖ್ಯಾಧಿಕಾರಿ ಶೋಭಾ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

‘ಕಳೆದ ಎರಡು ವರ್ಷಗಳಿಂದ ಬಸವೇಶ್ವರ ಜಯಂತಿ ಆಚರಣೆಗೆ ಸ್ಥಳೀಯ ಆಡಳಿತ ಪ್ರೋತ್ಸಾಹ ಧನ ನೀಡದೆ ನಿರ್ಲಕ್ಷ್ಯ ತಾಳಿದೆ. ಈ ಬಾರಿಯ ಬಸವ ಜಯಂತಿಗೆ ಸಹಕಾರ ನೀಡದಿದ್ದಲ್ಲಿ ಹೋರಾಟ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಜಯಂತಿಗಳ ಆಚರಣೆಗಳಿಗೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದ್ದು, ಇಲಾಖೆ ವತಿಯಿಂದ ಸಂಪೂರ್ಣ ಖರ್ಚು ಭರಿಸಲಾಗುತ್ತದೆ. ಆದರೆ ಸ್ಥಳೀಯ ಪಟ್ಟಣ ಪಂಚಾಯಿತಿಯು ಯಾವುದೇ ಜಯಂತಿ ಆಚರಣೆಗೆ ಪ್ರೋತ್ಸಾಹ ನೀಡುವುದಿರಲಿ, ಅವುಗಳನ್ನು ಆಚರಿಸದೆ ನಿರ್ಲಕ್ಷ್ಯ ಮಾಡುತ್ತಿದೆ’ ಎಂದು ಆರೋಪಿಸಿದರು.

ಸಮುದಾಯದ ಮುಖಂಡರಾದ ಬಗ್ಗೂರು ಸಿದ್ದಯ್ಯ, ಮಲ್ಲನಗೌಡ, ಪಂಪಾಪತಿ, ಮುರುಗ ರಾಜೇಂದ್ರ ಸ್ವಾಮಿ, ಶರಣ ಬಸಪ್ಪ, ಈರಣ್ಣ, ಕಿರಣ್ ಕುಮಾರ್ ಸ್ವಾಮಿ, ಗುರು ಸಿದ್ದಪ್ಪ, ಬಸವರಾಜ, ಅಯ್ಯಪ್ಪ, ವಿನಯ್, ಸುಧಾಕರ್ ಶಾಬಾದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-25-1669784593

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.