ತೆಕ್ಕಲಕೋಟೆ: ಸಮೀಪದ ಹಳೇಕೋಟೆ ಗ್ರಾಮದ ಮಾರೆಮ್ಮ ದೇವಿ ದೇವಸ್ಥಾನದ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ಕಾರಿ ಭೂಮಿ ಸಮೀಕ್ಷೆಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಮಂಗಳವಾರ ನಡೆಸಿದರು.ಈ ವೇಳೆ ಭೂಮಿ ಸಾಗುವಳಿದಾರರಾದ ವಲಿಸಾಬ್, ಗುರೆಳ್ಳು ಸಣ್ಣ ವೀರೇಶ, ಹಸೇನ್ ಸಾಬ್, ಈರಯ್ಯ, ಖಾಜಾಸಾಬ್, ಗುರೆಳ್ಳು ದೊಡ್ಡ ಜಂಬಣ್ಣ, ಪೂಜಾರಿ ಈರಯ್ಯ, ಕಂಬಳೆಪ್ಪ ಸೇರಿದಂತೆ ಇತರರು ಸರ್ವೆ ಕಾರ್ಯಕ್ಕೆ ವಿರೋಧಿಸಿದರು.

ಅನೇಕ ವರ್ಷಗಳಿಂದ ಭೂಮಿ ಸಾಗುವಳಿ ಮಾಡುತ್ತಿದ್ದು, ಇದನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಇದೀಗ ಏಕಾಏಕಿ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ತಾಲ್ಲೂಕು ಸರ್ವೆ ಇಲಾಖೆಯ ನಿರಂಜನ ಮೋಜಿಣಿದಾರ, ತಾಲ್ಲೂಕು ಕಾರ್ಮಿಕ ಇಲಾಖೆಯ ನಿರೀಕ್ಷಣಾಧಿಕಾರಿ ತಿರುಮಲೇಶ್, ಕಂದಾಯ ನಿರೀಕ್ಷಣಾಧಿಕಾರಿ ಗಣೇಶ, ತೆಕ್ಕಲಕೋಟೆ ಪೊಲೀಸ್ ಠಾಣೆ ಸಿಬ್ಬಂದಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-25-1917663730

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.