ತೆಕ್ಕಲಕೋಟೆ: ಪಟ್ಟಣದ ಸಿರಿಗೇರಿ ರಸ್ತೆಯ ಸಂಕ್ಲಮ್ಮ ದೇವಸ್ಥಾನದ ಬಳಿ ಆಕಸ್ಮಿಕ ಬೆಂಕಿಗೆ ಅಪಾರ ಪ್ರಮಾಣದ ಭತ್ತದ ಹುಲ್ಲಿನ ಬಣವೆಗಳು ಭಸ್ಮವಾದ ಘಟನೆ ಗುರುವಾರ ನಡೆದಿದೆ.

ರೈತರು ಸ್ಥಳಕ್ಕೆ ಧಾವಿಸಿ ನೀರು ಎರಚಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಜೆಸಿಬಿ ಯಂತ್ರದ ಮೂಲಕ ಬೆಂಕಿ ನಂದಿಸಿ ಇತರೆಡೆ ಹರಡದಂತೆ ಪ್ರಯತ್ನಿಸಿದರು. ಸ್ಥಳಕ್ಕೆ ಬಂದ ಸಿರುಗುಪ್ಪ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದರೆ ವೇಗವಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಬೆಂಕಿ ನಂದಿಸಲು ಸಾಧ್ಯವಾಗದೇ ಅಸಹಾಯಕರಾದರು.

ಅಗ್ನಿಶಾಮಕ ಸಿಬ್ಬಂದಿ ಒಂದೇ ಟ್ಯಾಂಕರ್ ನೀರು ತಂದಿದ್ದರಿಂದ ಬೆಂಕಿ ನಂದಿಸುವುದು ಸಾಧ್ಯವಾಗಲಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ರೈತರಾದ ಸಿದ್ದಾಪುರ ಗಾದಿಲಿಂಗ, ಮೀನ್ಗಿ ಸೋಮಲಿಂಗ, ಕುರುಗೋಡು ಬಸಯ್ಯ, ಹೊಳಗುಂದೆ ಮಾರೆಪ್ಪ, ಹೊಳಗುಂದೆ ನಿಂಗಪ್ಪ, ಹೊಳಗುಂದೆ ಈರಣ್ಣ, ಮಿನ್ಗಿ ಮಾರುತಿ ಅವರಿಗೆ ಸೇರಿದ 12 ಬಣವೆಗಳು ಬೆಂಕಿಗೆ ಆಹುತಿಯಾಗಿವೆ.

ಪ್ರತಿ ಬಣವೆಯಲ್ಲಿ ಅಂದಾಜು ₹30 ಸಾವಿರದಿಂದ ₹35 ಸಾವಿರ ಮೌಲ್ಯದ ಹುಲ್ಲಿನ ಸಂಗ್ರಹವಿತ್ತು. ಬೆಂಕಿಯಿಂದಾಗಿ ಅಂದಾಜು ₹3.5 ಲಕ್ಷದಿಂದ ₹4 ಲಕ್ಷ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-25-519413613

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.