ತೆಕ್ಕಲಕೋಟೆ: ‘ಮಾನವ ಜಗತ್ತಿಗೆ ಬಸವಣ್ಣನವರು ನೀಡಿದ ಲಿಂಗಾಯತ ಈ ನೆಲದ ಧರ್ಮ. ಇದನ್ನು ಉಳಿಸಿ ಜಗತ್ತಿಗೆ ಸಾರಬೇಕು’ ಎಂದು ಕೊಟ್ಟೂರು ಸಂಸ್ಥಾನ ಮಠ ಸೋಮಸಮುದ್ರ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಸಮೀಪದ ಸಿರಿಗೇರಿ ಗ್ರಾಮದಲ್ಲಿ ಸೋಮವಾರ ಬಸವ ಬಳಗ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು.

‘ಧರ್ಮಾಚರಣೆ ತೋರಿಕೆ ಆಗಬಾರದು. ಬಸವ ತತ್ವಾಚರಣೆ ಅಂದರೆ ಲಿಂಗಧಾರಣೆ, ವಿಭೂತಿ, ರುದ್ರಾಕ್ಷಿ ತಪ್ಪದೆ ಧರಿಸಬೇಕು. ಅಷ್ಟಾವರಣಗಳನ್ನು ಜೀವನದಲ್ಲಿ ಕೊನೆವರೆಗೂ ಮೈಗೂಡಿಸಿಕೊಳ್ಳಿ’ ಎಂದರು.

ಹಿಟ್ನಾಳ್ ಸರ್ಕಾರಿ ಪ್ರಥಮ ಕಾಲೇಜು ಸಹ ಪ್ರಾಚಾರ್ಯ ಟಿ.ಎಚ್.ಬಸವರಾಜ ಉಪನ್ಯಾಸ ನೀಡಿ ಲಿಂಗಾಯತ ಧರ್ಮದ ಉಗಮ ಮತ್ತು ಅದರ ಅವಶ್ಯಕತೆ, ಬಸವಣ್ಣನವರು ಇದನ್ನು ಪ್ರತಿಪಾದಿಸಿದ ಕುರಿತು ವಿವರಿಸಿದರು.

ಸಿರುಗುಪ್ಪ ಅಕ್ಕನ ಬಳಗದ ಶರಣೆ ಅಮರೇಶ್ವರಿ ಮಲ್ಲಿಕಾರ್ಜುನ ಗೌಡ, ಧರ್ಮದಲ್ಲಿ ಸ್ತ್ರೀಯರ ಪಾತ್ರ ಮತ್ತು ಇಂದಿನ ದಿನಮಾನಕ್ಕೆ ಅದರ ಅವಶ್ಯಕತೆ ಕುರಿತು ವಿಚಾರ ಮಂಡಿಸಿದರು. ಯುವ ಮುಖಂಡ ದರಪ್ಪನಾಯಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವ ಬಳಗದ ಅಧ್ಯಕ್ಷ, ಪದಾಧಿಕಾರಿಗಳು ಸೇರಿದಂತೆ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-25-1279906657

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.