ತೆಕ್ಕಲಕೋಟೆ: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಖಾಸಗಿ ವ್ಯಕ್ತಿಯ ಆಸ್ತಿಗೆ ಸಂಬಂಧಿಸಿದಂತೆ ಕೆ.ಎಂ.ಎಫ್-24 ಬೇಡಿಕೆ ಪುಸ್ತಕ ಕಛೇರಿಯಲ್ಲಿ ನಾಪತ್ತೆಯಾಗಿದೆ ಎಂದು ಹೇಳಲಾಗಿತ್ತು.

ಕೆಲ ದಿನಗಳ ನಂತರ ಪ್ರಭಾರ ಕರವಸೂಲಿಗಾರ ವಿಜಯಕುಮಾರ ಇವರ ಅಲಮಾರ ಹಿಂಭಾಗದಲ್ಲಿ ಬೇಡಿಕೆ ಪುಸ್ತಕ ದೊರೆತಿದೆ. ಈ ಬೇಡಿಕೆ ಪುಸ್ತಕದಲ್ಲಿ ಖಾತೆಗಳು ತಿದ್ದುಪಡಿ ಆಗಿರುವುದು ಕಂಡು ಅನುಮಾನಗೊಂಡು ಕಛೇರಿಯ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗಕಡತವನ್ನು ತೆರಿಗೆ ಮೌಲ್ಯಮಾಪಕ ಬಿ.ಷಣ್ಮುಖ ಸಹಾಯದೊಂದಿಗೆ ಸಣ್ಣ ಗಾದೆಪ್ಪ ಹಾಗೂ ಬಾವಿಮನೆ ಆಸೀಫ್ಸೇರಿ ಕಚೇರಿಯಿಂದ ಹೊರಗೆ ತೆಗೆದುಕೊಂಡು ಹೋಗಿ ಕಡತ ತಿದ್ದುಪಡಿ ಮಾಡಿ ಅದೇ ದಿನ ಸಂಜೆ ಕಡತ ತಂದು ಇಟ್ಟಿದ್ದು ಸಿಸಿ ಕ್ಯಾಮರಾದಿಂದ ಬಯಲಾಗಿದೆ.

3 ನೇ ವಾರ್ಡಿನ ನಿವಾಸಿ ಲೇಟ್ ಮುಜಾವರ್ ಕಬೀರ್ ಸಾಬ್ ಇವರ ಹೆಸರಿನಲ್ಲಿ ಖಾತೆಗೆ ಈ ಹಿಂದಿನ ಮುಖ್ಯಾಧಿಕಾರಿ ಪ್ರೇಮ್ ಅವರ ನಕಲಿ ಸಹಿ ಮಾಡಿ ಕಡತ ತಂದು ಇಟ್ಟಿರುತ್ತಾರೆ.

ಕಛೇರಿಯಿಂದ ಬೇಡಿಕೆ ಪುಸ್ತಕವನ್ನು ಹೊರಗಡೆ ತೆಗೆದುಕೊಂಡು ಕಬೀರ್ ಸಾಬ್ ಇವರಿಂದ ಶೇಖನ ಬೀ ಹೆಸರಿಗೆ ನೊಂದಾಯಿಸಿ, ನಕಲಿ ಮೊಹರು ಬಳಸಿ,ನಕಲಿ ಸಹಿಮಾಡಿರುವ ಬಾವಿಮನೆ ಆಸೀಫ್, ಷಣ್ಮುಖ ಹಾಗೂ ಸಣ್ಣ ಗಾದೆಪ್ಪ ಇವರ ವಿರುದ್ಧ ಮುಖ್ಯಾಧಿಕಾರಿ ಪರಶುರಾಮ ಹಾಗೂ ಹಿರಿಯ ಸಿಬ್ಬಂದಿ ಸುಬ್ರಹ್ಮಣ್ಯಂ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-25-389331939

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.