ಕೂಡ್ಲಿಗಿ: ತಾಲ್ಲೂಕಿನ ಈಚಲಬೊಮ್ಮನಹಳ್ಳಿಯ ಹೊರವಲಯದ ಉಡಸಲಮ್ಮ ದೇವಸ್ಥಾನದಲ್ಲಿ ಕಳವು ಮಾಡಿದ್ದ ಆರೋಪದಡಿ ಇಬ್ಬರನ್ನು ಶನಿವಾರ ಬಂಧಿಸಿದ ಕೂಡ್ಲಿಗಿ ಪೊಲೀಸರು, ಕಳವಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹಡಗಲಿ ತಾಲ್ಲೂಕಿನ ಕೆಂಚಮಲ್ಲನಹಳ್ಳಿಯ ಹಡಪದ ವೀರೇಶ್ ಹಾಗೂ ಕೂಡ್ಲಿಗಿ ತಾಲ್ಲೂಕಿನ ಪಾಲಯ್ಯನಕೋಟೆ ಗ್ರಾಮದ ಎಚ್. ಹನುಮಂತಪ್ಪ ಬಂಧಿತ ಆರೋಪಿಗಳು.

ಆಗಿದ್ದೇನು?: ‘ನವೆಂಬರ್ 23ರಂದು ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳರು, ತಿಜೋರಿಯಲ್ಲಿದ್ದ ₹1.46 ಲಕ್ಷ ಮೌಲ್ಯದ ದೇವರ ಮೂರ್ತಿ ಆಭರಣ, ₹12,900 ಮೌಲ್ಯದ ಬಂಗಾರದ ತಾಳಿ, ₹26,153 ಮೌಲ್ಯದ ಕಂಚಿನ ಆಭರಣಗಳು, ₹10 ಸಾವಿರ ಬೆಲೆ ಬಾಳುವ ಆಂಪಿ ಪ್ಲೇಯರ್ ಸೇರಿದಂತೆ ಒಟ್ಟು ₹1.95 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ್ ಎಚ್. ತಳವಾರ್, ಪಿಎಸ್ಐ ಸಿ. ಪ್ರಕಾಶ್, ಸಿಬ್ಬಂದಿ ಆಂಜಿನಪ್ಪ, ಹಸನುಲ್ಲಾ, ಜಿ. ಹಂಪಣ್ಣ, ಬಿ. ರಾಘವೇಂದ್ರ, ಪ್ರವೀಣ್ ಕುಮಾರ್, ಶಿವಕುಮಾರ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.