ಸೇತುವೆ ಮೇಲೆ ಸಂಚರಿಸುವ ಪಾದಾಚಾರಿಗಳು ತಮ್ಮ ಸುರಕ್ಷತೆಯನ್ನು ಕಾಪಾಡಿಕೊಂಡು ಹೋಗಲು ಸೂಚಿಸಿದ್ದಾರೆ. ಸೇತುವೆಯ ಎರಡು ಬದಿಯ ರಕ್ಷಣಾ ಕಂಬಿಗಳಲ್ಲಿ ಸಿಲುಕಿಕೊಂಡಿದ್ದ ಭಾರಿ ತ್ಯಾಜ್ಯ, ಕಸ, ಕಡ್ಡಿ ತೆರವುಗೊಳಿಸಲಾಗಿದೆ. ಸೇತುವೆ ಎಡ ಭಾಗದ ರಕ್ಷಣ ಕಂಬಿಗಳ ಜೊತೆಗೆ ಅಳವಡಿಸಿರುವ ಖಾಸಗಿ ಕಂಪನಿಗಳ ಕೇಬಲ್‍ಗಳಿಗೆ ಹಾನಿಯಾಗಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ನದಿ ನೀರಿನ ಪ್ರವಾಹ ಇಳಿಮುಖ ಆಗಿರುವುದರಿಂದ ಕೆಲ ಮೀನುಗಾರರು ತೆಪ್ಪದಲ್ಲಿ ತೆರಳಿ ಮೀನು ಬೇಟೆ ಆರಂಭಿಸಿದ್ದಾರೆ.