ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶಕ್ಕೆ ಪ್ರವಾಸಿಗರ ದಂಡು

Published : 15 ಆಗಸ್ಟ್ 2024, 16:01 IST
Last Updated : 15 ಆಗಸ್ಟ್ 2024, 16:01 IST
ಫಾಲೋ ಮಾಡಿ
Comments

ಮರಿಯಮ್ಮನಹಳ್ಳಿ: ಪಟ್ಟಣದಿಂದ ಹೊಸಪೇಟೆಗೆ ಹೋಗುವ ಮಾರ್ಗದ ಮದ್ಯ ಬರುವ ರಾಷ್ಟ್ರೀಯ ಹೆದ್ದಾರಿ -50ರ ಬದಿಯ ಗುಂಡಾ ಸಸ್ಯೋದ್ಯಾನದ ಬಳಿಯ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶ ನೋಡಲು ಗುರುವಾರ ಪ್ರವಾಸಿಗರ ದಂಡೇ ಆಗಮಿಸಿತ್ತು.

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಆವಾಂತರದಿಂದಾಗಿ ಜಲಾಶಯದ ವೀಕ್ಷಣೆಗೆ ಸಾರ್ವಜನಿಕರನ್ನು ಹಾಗೂ ಪ್ರವಾಸಿಗರಿಗೆ ನಿಬಂರ್ಧ ಹೇರಿರುವ ಕಾರಣ ಗುಂಡಾ ಫಾರೆಸ್ಟ್ ಬಳಿಯ ಹಿನ್ನೀರು ಪ್ರದೇಶ ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದರು.

ಐದು ದಿನದ ಹಿಂದೆ ವಿಶಾಲವಾದ ಹಿನ್ನೀರ ಪ್ರದೇಶದಲ್ಲಿನ ಜಲರಾಶಿ ದಾರಿಹೋಕರನ್ನು ತನ್ನತ್ತ ಸೆಳೆಯುತ್ತಿತ್ತು. ಅಲ್ಲದೆ ಹೆದ್ದಾರಿ ಬದಿ ನಿಂತು ನೋಡುವ ನೋಡುಗರ ಸಂಖ್ಯೆಯೂ ಹೆಚ್ಚಿತ್ತು.

ಪಕ್ಕದಲ್ಲೇ ಇರುವ ಗುಂಡಾ ಸಸ್ಯೋದ್ಯಾನಕ್ಕೆ ಸಾವಿರಕ್ಕೂ ಹೆಚ್ಚು ಹಿರಿಯರು, ಮಕ್ಕಳು ಸೇರಿದಂತೆ ಮಹಿಳೆಯರು ಭೇಟಿ ನೀಡಿದ್ದರು. ಹಿರಿಯರಿಗೆ ₹20 ಹಾಗೂ ಮಕ್ಕಳಿಗೆ ₹10 ಶುಲ್ಕ ನಿಗದಿ ಮಾಡಿರುವುದರಿಂದ ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಒಟ್ಟು ₹18 ಸಾವಿರ ಶುಲ್ಕ ಸಂಗ್ರಹವಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ತುಂಬಿ ತುಳುಕುತ್ತಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್‍ಗೇಟ್ ಆವಾಂತರದಿಂದಾಗಿ ಮರಿಯಮ್ಮನಹಳ್ಳಿಯಿಂದ ಹೊಸಪೇಟೆಗೆ ಹೋಗುವ ಮಾರ್ಗದ ಮದ್ಯ ಬರುವ ರಾಷ್ಟ್ರೀಯ ಹೆದ್ದಾರಿ-50ರ ಬದಿಯ ಜಲಾಶಯದ ಹಿನ್ನೀರು ಬಹುತೇಕ ಹಿಂದಿ ಸರಿದಿರುವ ದೃಶ್ಯ. (ಪ್ರಜಾವಾಣಿ ಚಿತ್ರ: ಎಚ್.ಎಸ್.ಶ್ರೀಹರಪ್ರಸಾದ್)
ತುಂಬಿ ತುಳುಕುತ್ತಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್‍ಗೇಟ್ ಆವಾಂತರದಿಂದಾಗಿ ಮರಿಯಮ್ಮನಹಳ್ಳಿಯಿಂದ ಹೊಸಪೇಟೆಗೆ ಹೋಗುವ ಮಾರ್ಗದ ಮದ್ಯ ಬರುವ ರಾಷ್ಟ್ರೀಯ ಹೆದ್ದಾರಿ-50ರ ಬದಿಯ ಜಲಾಶಯದ ಹಿನ್ನೀರು ಬಹುತೇಕ ಹಿಂದಿ ಸರಿದಿರುವ ದೃಶ್ಯ. (ಪ್ರಜಾವಾಣಿ ಚಿತ್ರ: ಎಚ್.ಎಸ್.ಶ್ರೀಹರಪ್ರಸಾದ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT