ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ಮೂರು ತಿಂಗಳಿಗೂ ಕಡಿಮೆ ಅವಧಿಗೆ ಕಾರ್ಯ ನಿರ್ವಹಿಸಿದ್ದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಪ್ರಾಧ್ಯಾಪಕ ಅನಂತ್ ಎಲ್. ಝಂಡೇಕರ್ ಬಗೆಬಗೆಯ ಅಕ್ರಮಗಳನ್ನು ಮಾಡಿರುವುದನ್ನು ಡಿ.ಎಸ್ ಶಿಂಧೆ ಅವರ ತನಿಖಾ ಸಮಿತಿ ಬಹಿರಂಗಪಡಿಸಿದೆ.

ಝಂಡೇಕರ್, 2023ರ ಡಿ. 6ರಿಂದ 2024ರ ಮಾ. 3ರ (3 ತಿಂಗಳಿಗೆ 3 ದಿನ ಕಡಿಮೆ) ಅವಧಿಗೆ ವಿಎಸ್ಕೆಯುನ ಪ್ರಭಾರ ಕುಲಪತಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರು ವಿಶ್ವವಿದ್ಯಾಲಯಕ್ಕೆ ನೇಮಕಗೊಂಡಿರುವುದೇ ಅಕ್ರಮ ಎಂದೂ, ಈ ಹಿಂದೆ ಕೆಲಸ ಮಾಡಿದ್ದ ಜಾಗಗಳಲ್ಲಿ ಅವರು ವಜಾಗೊಂಡಿರುವುದಾಗಿಯೂ, ಅವರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಆದ ಮೇಲೆ ಅಕ್ರಮಗಳು ನಡೆದಿರುವುದಾಗಿಯೂ, ಪ್ರಶ್ನೆ ಮಾಡಿದವರನ್ನು ಪಿಸ್ತೂಲ್ನಿಂದ ಗುಂಡು ಹೊಡೆಯುವುದಾಗಿಯೂ, ಹುದ್ದೆ ಕೊಡಿಸುವ ಆಮಿಷವೊಡ್ಡಿ ಹಣ ಪಡೆದಿರುವುದಾಗಿಯೂ, ತಮಗೆ ಬೇಕಾದವರಿಗೆ ಅಕ್ರಮವಾಗಿ ಕೆಲಸ ಕೊಡಿಸಿರುವುದಾಗಿಯೂ ಆರೋಪಗಳು ಕೇಳಿ ಬಂದಿದ್ದವು.

ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿಯೂ ಸರಣಿ ವರದಿಗಳು ಪ್ರಕಟಗೊಂಡಿದ್ದವು. ಇದಲ್ಲದೇ, ಹಲವರು ಸಂಬಂಧಿಸಿದ ಪ್ರಾಧಿಕಾರಗಳಿಗೆ ದೂರು ನೀಡಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು 2025ರ ಜೂನ್ 13ರಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ಡಿ.ಎಸ್ ಶಿಂಧೆ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ ಮಾಡಿತ್ತು.

ಈ ಸಮಿತಿ ಕೆಲ ತಿಂಗಳ ಹಿಂದೆ ವಿಶ್ವವಿದ್ಯಾಲಯಕ್ಕೆ ತನಿಖಾ ವರದಿ ಸಲ್ಲಿಕೆ ಮಾಡಿದ್ದು, ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ಝಂಡೇಕರ್ ನಕಲಿ ದಾಖಲೆಗಳನ್ನು ನೀಡಿದ್ದಾರೆ. ಅವರು ಈ ಹಿಂದೆ ಕೆಲಸ ಮಾಡಿದ್ದರು ಎಂದು ಹೇಳಿಕೊಂಡಿದ್ದ ಕಾಲೇಜುಗಳು, ವಿಶ್ವವಿದ್ಯಾಲಯಗಳು ಇದನ್ನು ಖಚಿತಪಡಿಸಿರುವುದನ್ನು ತನಿಖಾ ಸಮಿತಿ ಪರಿಗಣಿಸಿದೆ. ಕುಲಸಚಿವ (ಆಡಳಿತ) ಎಸ್.ಎನ್ ರುದ್ರೇಶ್ ಅವರ ಅಧಿಕಾರವನ್ನು ಅಕ್ರಮವಾಗಿ ಮೊಟಕುಗೊಳಿಸಿ, ಅವರ ಸ್ಥಾನಕ್ಕೆ ಬೇರೊಬ್ಬರನ್ನು ನಿಯೋಜಿಸಿರುವುದು, ದಿವ್ಯಾ ಎಂಬುವವರನ್ನು ನಂದಿಹಳ್ಳಿ ಸ್ನಾತಕೋತ್ತ ಕೇಂದ್ರಕ್ಕೆ ಅಕ್ರಮವಾಗಿ ಪೂರ್ಣಕಾಲಿಕ ಉಪನ್ಯಾಸಕರಾಗಿ ನೇಮಕ ಮಾಡಿರುವುದು, ಪಿಎಚ್ಡಿ ಪರಿನಿಯಮಾವಳಿಗೆ ಅಕ್ರಮವಾಗಿ ತಿದ್ದುಪಡಿ ತಂದಿರುವುದು, ಇಂಗ್ಲಿಷ್ ಬದಲಿಗೆ ಕನ್ನಡದಲ್ಲಿ ಪಿಎಚ್ಡಿ ಪ್ರಬಂಧ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿರುವುದು, ಕಾರಣವೇ ನೀಡದೇ ಸಿಂಡಿಕೇಟ್, ವಿದ್ಯಾವಿಷಯಕ ಪರಿಷತ್ ಸಭೆಗಳನ್ನು ಮುಂದೂಡಿರುವುದು, ಹೆಚ್ಚುವರಿ ಅತಿಥಿ ಉಪನ್ಯಾಸಕರನ್ನು ನೇಮಿಸಿರುವುದನ್ನು ತನಿಖಾ ಸಮಿತಿ ಪಟ್ಟಿ ಮಾಡಿದೆ.

ಅಲ್ಲದೇ ಝಂಡೇಕರ್ ಅವರ ಮೇಲಿನ ಆರೋಪಗಳು ಮೇಲ್ನೋಟಕ್ಕೇ ಸಾಬೀತಾಗುವಂಥ ಪ್ರಕರಣ ಎಂದು ತನಿಖಾ ಸಮಿತಿ ಅಭಿಪ್ರಾಯಪಟ್ಟಿದೆ.

ಅಮಾನತು ಮಾಡಲು ಶಿಫಾರಸು: ಝಂಡೇಕರ್ ವಿರುದ್ಧ ವಿಶ್ವವಿದ್ಯಾಲಯ ಶಿಸ್ತು ಕ್ರಮ ಜರುಗಿಸಬೇಕು. ಕರ್ತವ್ಯ ಲೋಪ, ದುರ್ವರ್ತನೆ ಆಪಾದನೆಗಳು ನಿಜವೆಂದು ಕಂಡು ಬಂದಿರುವುದರಿಂದ ಅವರನ್ನು ಅಮಾನತು ಮಾಡಬೇಕು. ಹುದ್ದೆ ಕೊಡಿಸುವ ನೆಪದಲ್ಲಿ ಮಹಿಳೆಯೊಬ್ಬರಿಂದ ಹಣ ಪಡೆದು ಹಿಂದಿರುಗಿಸಿರುವುದು ಸಾಬೀತಾಗಿರುವುದರಿಂದ ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು. ಜತೆಗೆ ಶಿಸ್ತು ಪ್ರಾಧಿಕಾರವು ಇತರೆ ಯಾವುದೇ ಸೂಕ್ತ ಕ್ರಮಗಳನ್ನಾದರೂ ತೆಗೆದುಕೊಳ್ಳಬಹುದು ಎಂದು ಹೇಳಿದೆ.

ತನಿಖೆಯಲ್ಲ, ಸತ್ಯ ಶೋಧನೆಯಷ್ಟೇ: ಮುನಿರಾಜ

ನಿವೃತ್ತ ನ್ಯಾಯಾಧೀಶ ಡಿ.ಎಸ್ ಶಿಂಧೆ ಅವರು ನೀಡಿರುವುದು ತನಿಖಾ ವರದಿ ಅಲ್ಲ. ಸತ್ಯಶೋಧನೆಯ ವರದಿಮಾತ್ರ. ಇದನ್ನು ಆಧರಿಸಿ ತನಿಖೆ ಮಾಡಲಾಗುತ್ತದೆ. ಅದಕ್ಕಾಗಿ ರಾಜ್ಯಪಾಲರ ಅನುಮತಿ ಕೋರಲಾಗುತ್ತದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಮುನಿರಾಜು ‘ಪ್ರಜಾವಾಣಿ’ಗೆ ಹೇಳಿದ್ದಾರೆ.

ಆದರೆ, ನಿವೃತ್ತ ನ್ಯಾಯಾಧೀಶ ಡಿ.ಎಸ್. ಶಿಂಧೆ ಅವರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಇದು ‘ನ್ಯಾಯಾಂಗ ತನಿಖೆ’ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಅಷ್ಟೇ ಅಲ್ಲ, ಜಂಡೇಕರ ವಿರುದ್ಧದ ಆರೋಪಗಳ ಕುರಿತು ಡಿ.ಎಸ್ ಶಿಂಧೆ ಅವರ ಸಮಿತಿ ತನಿಖೆ ಆರಂಭಿಸಿದೆ. ಯಾವುದೇ ಒತ್ತಡಗಳಿಗೆ ಒಳಗಾಗದೇ ತನಿಖೆ ಮಾಡಿಸಲಾಗುತ್ತಿದೆ ಎಂದು ಕುಲಪತಿ ಮುನಿರಾಜು ಅವರು 2025ರ ಜುಲೈ 2ರಂದು ‘ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ’ ಮೂಲಕ ಅಧಿಕೃತವಾಗಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ಹೀಗಿದ್ದರೂ, ಇದು ತನಿಖೆಯಲ್ಲ, ಕೇವಲ ಸತ್ಯಶೋಧನೆ, ಮುಂದೆ ತನಿಖೆ ನಡೆಯಲಿದೆ ಎಂಬ ಕುಲಪತಿ ಮುನಿರಾಜು ಹೇಳಿಕೆ ಅನುಮಾನ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.