ಸೋಮವಾರ, 18 ಮೇ 2026
×
ADVERTISEMENT

ಬಳ್ಳಾರಿ: ಹಗರಣಗಳ ವಿರುದ್ಧ ವಿಎಸ್‌ಕೆಯು ಮೌನಕ್ಕೆ ಆಕ್ರೋಶ

ರಾಜ್ಯಪಾಲರಿಗೆ ಪತ್ರ ಬರೆಯುವ ಎಚ್ಚರಿಕೆ
Published : 16 ಮಾರ್ಚ್ 2026, 2:23 IST
Last Updated : 16 ಮಾರ್ಚ್ 2026, 2:23 IST
ADVERTISEMENT
ಫಾಲೋ ಮಾಡಿ
Comments
ಮೀನ ಮೇಷದ ಹಿಂದಿನ ಗುಟ್ಟೇನು?:   ಬಳ್ಳಾರಿ ವಿಶ್ವವಿದ್ಯಾಲಯ ಅಕ್ರಮಗಳನ್ನು ಪೋಷಿಸುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ತನಿಖಾ ವರದಿಗಳೇ ಕೈಯಲ್ಲಿದ್ದರೂ ಅವುಗಳನ್ನು ಸಲ್ಲಿಸಿ ತಿಂಗಳುಗಳೇ ಉರುಳಿದರೂ ಏನೂ ಕ್ರಮಗಳಾಗದಿದ್ದರೆ ಅರ್ಥವೇನು. ಗುತ್ತಿಗೆ ನೌಕರರ ಪಿಎಫ್‌ ಮತ್ತು ಇಎಸ್‌ಐ ಪಾವತಿಯಲ್ಲೂ ಹಿಂದೊಮ್ಮೆ ₹1.07 ಕೋಟಿ ಹಗರಣ ನಡೆದಿತ್ತು. ಸತ್ಯ ಶೋಧನಾ ಸಮಿತಿಯ ವರದಿ ಇದನ್ನು ಬಯಲು ಮಾಡಿತ್ತು. ಆಗ ಸಂತ್ರಸ್ತರಿಗೆ ₹42 ಲಕ್ಷ ಮಾತ್ರ ನೀಡಲಾಯಿತು. ಬಾಕಿ ಇರುವ ₹65 ಲಕ್ಷ ಕೊಡುವುದಕ್ಕೆ ತಪ್ಪಿತಸ್ಥರಾದ ಹಣಕಾಸು ಅಧಿಕಾರಿ ಕೆ.ಸಿ.ಪ್ರಶಾಂತ್ ಮತ್ತು ಇತರರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಎದುರಾಗಿರುವ ಅಡ್ಡಿಯಾದರೂ ಏನು? ಮೀನಾ ಮೇಷ ಎಣೆಸುವುದರ ಗುಟ್ಟಾದರೂ ಏನು? ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಲೋಕಾಯುಕ್ತರಿಗೆ ದೂರು ನೀಡುತ್ತೇನೆ. ಕಾರ್ಮಿಕ ಭವಿಷ್ಯ ನಿಧಿಗೂ ದೂರು ನೀಡುವೆ. ರಾಜ್ಯಪಾಲರು ಮತ್ತು ಸರ್ಕಾರಕ್ಕೆ ಪತ್ರ ಬರೆಯುತ್ತೆನೆ.    
ಮರ್ಚೆಡ್‌ ಮಲ್ಲಿಕಾರ್ಜುನಗೌಡ ಸಿಂಡಿಕೇಟ್‌ ಮಾಜಿ ಸದಸ್ಯ
ಕೂಡಲೇ ಕ್ರಮ ಕೈಗೊಳ್ಳಿ: ಜ್ಞಾನ ದೇಗುಲವಾಗಬೇಕಿದ್ದ ವಿಶ್ವವಿದ್ಯಾಲಯ ಅಕ್ರಮಗಳ ಸುಳಿಯಲ್ಲಿ ಸಿಲುಕಿರುವುದು ಬೇಸರದ ಸಂಗತಿ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಕುಲಪತಿಗಳು ಅಕ್ರಮಗಳ ಬಗ್ಗೆ ಮೌನ ವಹಿಸಿರುವುದೂ ಒಪ್ಪುವಂಥ ವಿಚಾರವಲ್ಲ. ತನಿಖಾ ವರದಿಯಲ್ಲಿ ಸೂಚಿಸಿರುವಂತೆ ಆರೋಪಿಗಳನ್ನು ಕೂಡಲೇ ಅಮಾನತು ಮಾಡಬೇಕು. ನಂತರ ಎಫ್‌ಐಆರ್‌ ದಾಖಲು ಮಾಡಬೇಕು. ರಾಜ್ಯಪಾಲರು ಮತ್ತು ಸರ್ಕಾರ ಕೂಡಲೇ ಇತ್ತ ಗಮನಹರಿಸಬೇಕು.
ವೆಂಕಟೇಶ ಹೆಗಡೆ ವಿದ್ಯಾವಿಷಯಕ ಪರಿಷತ್‌ನ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT