ಕಂಪ್ಲಿ (ಬಳ್ಳಾರಿ ಜಿಲ್ಲೆ): ‘ವಕ್ಫ್ ಎಂಬ ಕಾನೂನು ರದ್ದಾಗಬೇಕು ಎನ್ನುವವರೇ ನಿಜವಾದ ಸ್ವಾಮೀಜಿಗಳು. ಅವರ ಪಾದಕ್ಕೆ ನಮಸ್ಕರಿಸುವೆ ಹೊರತು ಪುಕ್ಸಟ್ಟೆ ಸ್ವಾಮೀಜಿಗಳಿಗಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕಂಪ್ಲಿಯಲ್ಲಿ ಶನಿವಾರ ‘ವಕ್ಫ್ ಹಠಾವೋ ದೇಶ ಬಚಾವೋ’ ಎರಡನೇ ಹಂತದ ಹೋರಾಟದಲ್ಲಿ ಮಾತನಾಡಿದ ಅವರು, ‘ವಕ್ಫ್ ನೋಟಿಸ್ ಕುರಿತು ಒಬ್ಬ ಸ್ವಾಮೀಜಿಯು ಬಾಯಿ ಬಿಚ್ಚಲಿಲ್ಲ. ಇಂಥ ಸ್ವಾಮೀಜಿಗಳು ನಮಗೆ ಬೇಕೆ’ ಎಂದರು.

‘ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವುದಾಗಿ ಹೇಳುತ್ತಾರೆ. ಅದರೆ, ಸಂಗೊಳ್ಳಿ ರಾಯಣ್ಣ ಆಗಿ ಹುಟ್ಟುವುದಾಗಿ ಹೇಳಲ್ಲ. ನಾನು ಮುಂದಿನ ಜನ್ಮದಲ್ಲೂ ಹಿಂದೂ ಆಗುತ್ತೇನೆ. ತಪ್ಪಿಯೂ ಮುಸ್ಲಿಂ ಆಗುವುದಿಲ್ಲ’ ಎಂದರು.

ಮಾಜಿ ಸಂಸದ ಪ್ರತಾಪ ಸಿಂಹ ಮಾತನಾಡಿ, ‘ರಾಜಕಾರಣಿಗಳು ರಾಜಕೀಯದ ಕಾರಣಕ್ಕೇ ಎಲ್ಲವನ್ನೂ ಮಾಡುತ್ತಾರೆ. ಕರ್ನಾಟಕದ ತುಂಬ ಹೊಂದಾಣಿಕೆ ರಾಜಕಾರಣಿಗಳೇ ತುಂಬಿದ್ದಾರೆ. ರೈತರು ಮಠ ಮಾನ್ಯಗಳ, ದೇಗುಲಗಳ ಆಸ್ತಿ ರಕ್ಷಣೆಗೆ ಹೋರಾಟ ಮಾಡುತ್ತಿದ್ದೇವೆ. ಅದಕ್ಕಾಗಿಯೇ ಈ ಅಭಿಯಾನ’ ಎಂದರು.

ಶಾಸಕ ರಮೇಶ ಜಾರಕಿಹೊಳಿ, ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿದರು. ಕಂಪ್ಲಿ ಕಲ್ಮಠದ ಪ್ರಭುಸ್ವಾಮೀಜಿ, ಹಂಪಿ ಮಾತಂಗಪರ್ವತದ ಪೂರ್ಣಾನಂದ ಸ್ವಾಮೀಜಿ, ಪ್ರಮುಖರಾದ ಜೆ.ಎಂ.ಸಿದ್ದೇಶ್ವರ, ಕುಮಾರ ಬಂಗಾರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.